Connect with us

Cinema

ನಾನು ಸತ್ತರೆ ದೇಶದ ಗಡಿಯಲ್ಲೇ ಪ್ರಾಣ ಬಿಡ್ತೇನೆ: ಅಲ್ಲು ಅರ್ಜುನ್

Published

on

ಹೈದರಾಬಾದ್: ಟಾಲಿವುಡ್ ಅಂಗಳದಲ್ಲಿ ಸದ್ಯ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮೇನಿಯಾ ಶುರುವಾಗಿದೆ. ಸೋಮವಾರ ಅಲ್ಲು ಅರ್ಜುನ್ ಅಭಿನಯದ ‘ನಾ ಪೇರು ಸೂರ್ಯ-ನಾ ಇಲ್ಲು ಇಂಡಿಯಾ’ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ.

ಟ್ರೇಲರ್ ನಲ್ಲಿ ಭಾರತೀಯ ಯೋಧನಾಗಿ ಅಲ್ಲು ಅರ್ಜುನ್ ನಟಿಸಿದ್ದು, ನೋಡುಗರಲ್ಲಿ ದೇಶಾಭಿಮಾನದ ಕಿಚ್ಚು ಹೊತ್ತಿಸುವಂತಿದೆ. ಒಬ್ಬ ಸೈನಿಕ ದೇಶದ ರಕ್ಷಣೆಗಾಗಿ ಯಾವೆಲ್ಲಾ ಕಷ್ಟ-ತೊಂದರೆಗಳನ್ನು ಎದುರಿಸುತ್ತಾನೆ ಎಂಬುದನ್ನು ಈ ಟ್ರೇಲರ್‍ನಲ್ಲಿ ಕಾಣಬಹುದು. ಇನ್ನು ಸಿನಿಮಾದಲ್ಲಿ ಅಲ್ಲು ಅರ್ಜುನ್ ಟೀಂ ಕ್ಯಾಪ್ಟನ್ ಆಗಿ, ಆ್ಯಂಗ್ರಿ ಯಂಗ್ ಮ್ಯಾನ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್ ಗಳಲ್ಲಿ ಚಿತ್ರದ ಬಗ್ಗೆ ಕ್ರೇಜ್ ಹುಟ್ಟುಹಾಕಿದ್ದಾರೆ.

ಸೇನೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗೆ ಎದುರಾಗುವ ಸವಾಲುಗಳು, ಒತ್ತಡಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಾಣವಾಗಿದೆ ಎಂದು ಟ್ರೇಲರ್ ನಿಂದ ತಿಳಿದು ಬರುತ್ತದೆ. ನಾನು ಒಂದು ವೇಳೆ ಸತ್ತರೆ ದೇಶದ ಗಡಿಯಲ್ಲಿ ನನ್ನ ಪ್ರಾಣಬಿಡುತ್ತೇನೆ ಎಂಬ ಡೈಲಾಗ್ ನೋಡಿದ್ರೆ ಒಂದು ಕ್ಷಣ ರೋಮಾಂಚನವಾಗುತ್ತದೆ.

ಅಲ್ಲು ಅರ್ಜುನ್ ಗೆ ಜೊತೆಯಾಗಿ ನಟಿ ಅನು ಎಮ್ಯಾನುಲ್ ನಟಿಸಿದ್ದಾರೆ. ಚಿತ್ರಕ್ಕೆ ವಿಶಾಲ್-ಶೇಖರ್ ಸಂಗೀತ ನೀಡಿದ್ದು, ವಕ್ಕನಾಥಮ್ ವಂಶಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿರಿಸಾ ಶ್ರೀಧರ್ ಮತ್ತು ಬನ್ನಿ ವಾಸ್ ಫಿಲ್ಮ್ ಗೆ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಬಿಡುಗಡೆಗೊಂಡ ಒಂದು ದಿನದಲ್ಲಿ 5.5 ಲಕ್ಷಕ್ಕೂ ಹೆಚ್ಚು ವ್ಯೂವ್ ಮತ್ತು 25 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

https://youtu.be/iO16imFMvmA

Click to comment

Leave a Reply

Your email address will not be published. Required fields are marked *