ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

Public TV
2 Min Read
allu arjun 2

ಮೆಗಾ ಫ್ಯಾಮಿಲಿಯಲ್ಲಿ (Mega Family) ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳಿದ್ದಾರೆ. ಒಬ್ಬರು ರಾಮ್ ಚರಣ್ (Ram Charan) ಮತ್ತೊಬ್ಬರು ಅಲ್ಲು ಅರ್ಜುನ್. ಇಬ್ಬರ ಇದೀಗ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದೆ. `ನಾಟು ನಾಟು’ ಹಾಡಿಗೆ ಅಲ್ಲು ಅರ್ಜುನ್ (Allu Arjun) ಟ್ವೀಟ್ ಮಾಡಿರುವ ರೀತಿ ರಾಮ್ ಚರಣ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.

rrr

ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ (Naatu Naatu) ಹಾಡಿಗೆ ಇತ್ತೀಚಿಗೆ ಆಸ್ಕರ್ (Oscars 2023) ಪ್ರಶಸ್ತಿ ಲಭಿಸಿದೆ. ಟಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಿಂದ ತಂಡಕ್ಕೆ ಶುಭಕೋರುತ್ತಿದ್ದಾರೆ. ಅದರಂತೆಯೇ ಅಲ್ಲು ಅರ್ಜುನ್ ಕೂಡ ಟ್ವೀಟ್ ಮೂಲಕ ಇಡೀ `ಆರ್‌ಆರ್‌ಆರ್’ ಟೀಮ್‌ಗೆ ಶುಭಕೋರಿದ್ದರು. ಈ ವೇಳೆ ಜೂ.ಎನ್‌ಟಿಆರ್‌ಗೆ ಕುರಿತು ಮಾಡಿದ ಒಂದೇ ಒಂದು ಟ್ವೀಟ್ ರಾಮ್ ಚರಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಇದನ್ನೂ ಓದಿ: ಜಿನಿವಾದಲ್ಲಿ ನಾಳೆ ‘ಕಾಂತಾರ’ ಸಿನಿಮಾ ಪ್ರದರ್ಶನ : ರಿಷಬ್ ಶೆಟ್ಟಿ ಭಾಗಿ

allu arjun

ಭಾರತಕ್ಕೆ (India) ಇದೊಂದು ಅದ್ಭುತ ಕ್ಷಣ. ತೆಲುಗು ಹಾಡೊಂದು ಆಸ್ಕರ್ ವೇದಿಕೆಯಲ್ಲಿ ಶೇಕ್ ಮಾಡುವುದನ್ನು ನೋಡಿ ಖುಷಿಯಾಗುತ್ತಿದೆ. ಎಂ.ಎಂ ಕೀರವಾಣಿಯವರಿಗೆ, ಚಂದ್ರಬೋಸ್ ಅವರಿಗೆ, ಪ್ರೇಮ್ ರಕ್ಷಿತ್ ಅವರಿಗೆ, ಕಾಲ ಭೈರವ ಅವರಿಗೆ, ರಾಹುಲ್ ಅವರಿಗೆ, ನನ್ನ ಸಹೋದರ ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

ಹಾಗೆಯೇ ನಮ್ಮ ತೆಲುಗಿನ ಹೆಮ್ಮೆ, ತಮ್ಮ ಹೆಜ್ಜೆಗಳಿಂದ ಪ್ರಪಂಚವನ್ನೇ ಕುಣಿಯುವಂತೆ ಮಾಡಿದ ಜ್ಯೂ.ಎನ್‌ಟಿಆರ್ ಅವರಿಗೆ, ಈ ಎಲ್ಲಾ ಮ್ಯಾಜಿಕ್ ಹಿಂದಿರುವ ವ್ಯಕ್ತಿ ರಾಜಮೌಳಿಯವರಿಗೆ ಅಭಿನಂದನೆ ಎಂದಿದ್ದರು. ಭಾರತೀಯ ಸಿನಿಮಾ ರಂಗಕ್ಕೆ ಹೃದಯ ಸ್ಪರ್ಷಿಸಿದ ಕ್ಷಣ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

ಐಕಾನ್ ಸ್ಟಾರ್ ಅವರು ತಾರಕ್‌ಗೆ ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್ ಚರಣ್ ಫ್ಯಾನ್ಸ್ ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ʻಪುಷ್ಪʼ ಸ್ಟಾರ್ ವಿರುದ್ಧ ಚರಣ್‌ ಅಭಿಮಾನಿಗಳು ಕಿಡಿಕಾರಿದ್ದಾರೆ.

Share This Article