ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಥಿಯೇಟರ್‌ನಲ್ಲಿ 1409 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿವಾದ ನಡುವೆಯೂ 1500 ಕೋಟಿ ರೂ. ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಗೌಡ ರಿಲೀಸ್
- Advertisement -
ಸಂಧ್ಯಾ ಥಿಯೇಟರ್ ಮಹಿಳೆಯ ಕಾಲ್ತುಳಿತ ಕೇಸ್‌ನಿಂದ ಅಲ್ಲು ಅರ್ಜುನ್‌ಗೆ (Allu Arjun) ಬೇಲ್ ಸಿಕ್ಕ ಬೆನ್ನಲ್ಲೇ `ಪುಷ್ಪ 2′ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುತ್ತಿದೆ. ಇದೀಗ ಈ ಚಿತ್ರ ವಿಶ್ವಾದ್ಯಂತ 1409 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿದೆ.
- Advertisement -
View this post on Instagram
- Advertisement -
ಇನ್ನೂ ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್ ಆಗಿದೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
- Advertisement -
ಅಂದಹಾಗೆ, ‘ಪುಷ್ಪ 2’ ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಅನೇಕರು ನಟಿಸಿದ್ದಾರೆ.