Connect with us

Cinema

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ

Published

on

ಹೈದರಾಬಾದ್: ಅಲಾ ವೈಕುಂಠಪುಮುಲೊ ಸಕ್ಸಸ್ ಬಳಿಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳು ಸಹ ಈ ಚಿತ್ರದ ಕುರಿತು ಅಷ್ಟೇ ಕುತೂಹಲ ಇಟ್ಟುಕೊಂಡಿದ್ದಾರೆ. ತಮ್ಮ ವಿಶಿಷ್ಟ ಸಿನಿಮಾ ಮೂಲಕವೇ ಅಭಿಮಾನಿಗಳನ್ನು ರಂಜಿಸುವ ಅಲ್ಲು, ಈ ಬಾರಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿದ್ದಾರೆ.

ಈಗಾಗಲೇ ಪುಷ್ಪ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪೋಸ್ಟರ್ ಸಹ ಅಷ್ಟೇ ಕ್ಯೂರಿಯಾಸಿಟಿ ಹುಟ್ಟಿಸುತ್ತಿದ್ದು, ಅಲ್ಲು ಇದರಲ್ಲಿ ಫುಲ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಚಂದನದ ಜೊತೆಗೆ ಅರಣ್ಯಾಧಿಕಾರಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಹೌದು ಹಿಂದೆಲ್ಲ ರಕ್ತ ಚಂದನದವಿದ್ದು, ಪೊಲೀಸರ ಮಧ್ಯದಲ್ಲಿ ಅಲ್ಲು ಕುಳಿತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಚಾಲಕನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಯಾವ ರೀತಿಯ ಕಥೆ ಇರಬಹುದು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಖುಷಿಪಡಿಸಿದ್ದರು. ಇದೀಗ ಬೇಸರಗೊಳಿಸುವ ಸುದ್ದಿಯೊಂದು ಹರಿದಾಡುತ್ತಿದ್ದು, ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡುತ್ತಿಲ್ಲ. ಅಲ್ಲು ಅರ್ಜುನ್ ಉತ್ತಮ ಡ್ಯಾನ್ಸರ್. ಪ್ರತಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟೆಪ್‍ಗಳನ್ನು ಹಾಕಿದ್ದಾರೆ. ಅಲ್ಲು ಅರ್ಜುನ್ ಹೊಸ ಡ್ಯಾನ್ಸ್ ಸ್ಟೆಪ್ಸ್ ನೋಡಲಿಕ್ಕಾಗಿಯೇ ಎಷ್ಟೋ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಆದರೆ ಪುಷ್ಪ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡುವುದಿಲ್ಲವಂತೆ.

ಲಾರಿ ಚಾಲಕ ಪಾತ್ರ ನಿರ್ವಹಿಸುತ್ತಿರುವುದರಿಂದ ಅಲ್ಲು ಈ ಸಿನಿಮಾದಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಸುಕುಮಾರ್ ಈ ಸಿನಿಮಾವನ್ನು ನೈಜವಾಗಿ ಚಿತ್ರೀಕರಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಅಲ್ಲು ಬಳಸುವ ಬಟ್ಟೆಗಳು ನೈಜವಾಗಿ ಕಾಣಲೆಂದು ಟೀಯಲ್ಲಿ ನೆನೆಸಿ, ನಂತರ ಎರಡು ದಿನ ಬಿಟ್ಟು ತೊಳೆಸುವಂತೆ ಸುಕುಮಾರ್ ತಿಳಿಸಿದ್ದಾರಂತೆ. ಅಷ್ಟು ಸೂಕ್ಷ್ಮವಾಗಿ ನೈಜತೆಗೆ ಒತ್ತು ನೀಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಕನ್ನಡ, ತೆಲುಗು ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿದ್ದು, ಚಿತ್ರತಂಡ ಪೋಸ್ಟರ್ ನ್ನು  5 ಭಾಷೆಗಳಲ್ಲಿ ಬಿಡುಗಡೆ ಮಾಡಿತ್ತು.

ಈಗಾಗಲೇ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರೇ ಖಚಿತಪಡಿಸಿದ್ದರು. ಇನ್ನು ಕನ್ನಡಿಗರಾದ ಸುನಿಲ್ ಶೆಟ್ಟಿ ಹಾಗೂ ಡಾಲಿ ಧನಂಜಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜಗಪತಿ ಬಾಬು, ಪ್ರಕಾಶ್ ರೈ ಪ್ರಮುಖ ಪಾತ್ರಗಳ್ಳುತ್ತಿದ್ದು, ಚಿತ್ರದ ಸಾಹಸ ಸನ್ನಿವೇಶವೊಂದಕ್ಕೆ 6 ಕೋಟಿ ರೂ. ಖರ್ಚು ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆಯಂತೆ.

Click to comment

Leave a Reply

Your email address will not be published. Required fields are marked *