ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ದೀಪಾವಳಿ ಹಬ್ಬದಂದು ಪತ್ನಿಯೊಂದಿಗೆ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಹಾಗೂ ರಾಮ್‍ಚರಣ್ ತೇಜ ದೀಪಾವಳಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಫಾರ್ಮ್ ಹೌಸ್‍ನಲ್ಲಿ ಸಖತ್ ಗ್ರ್ಯಾಂಡ್ ಆಗಿ ಆಚರಿಸಿದರು. ಈ ವೇಳೆ ರಾಮ್‍ಚರಣ್ ಅವರ ಪತ್ನಿ ಉಪಸನಾ ಕೊನಿಡೆಲಾ, ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ಕೂಡ ಜೊತೆಗಿದ್ದರು. ಸೋದರ ಸಂಬಂಧಿಗಳಾದ ರಾಮ್‍ಚರಣ್ ಹಾಗೂ ಅಲ್ಲು ಅರ್ಜುನ್ ತಮ್ಮ ಮನೆಯವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
View this post on Instagram
ಇದೀಗ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹ ರೆಡ್ಡಿ ದೀಪಾವಳಿ ಹಬ್ಬದ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಅಲ್ಲು ಅರ್ಜುನ್ ಸಖತ್ ಸ್ಟೈಲಿಶ್ ಹಾಗೂ ಹ್ಯಾಂಡ್‍ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲುಗೆ ನಾನೇನು ಕಡಿಮೆ ಎಂಬಂತೆ ಪತ್ನಿ ಸ್ನೇಹ ಕೂಡ ಮಿಂಚಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು
ವೀಡಿಯೋ ಪ್ಲೇ ಆಗುತ್ತಿದ್ದಂತೆಯೇ ಮೊದಲಿಗೆ ಲೈಟಿಂಗ್, ಕ್ಯಾಂಡೆಲ್‍ನಿಂದ ಅಲಂಕಾರಗೊಳಿಸಿರುವುದನ್ನು ಕಾಣಬಹುದಾಗಿದೆ. ನಂತರ ಕ್ರೀಮ್ ಕಲರ್ ಗಾಗ್ರಾಂ ತೊಟ್ಟು ಸ್ನೇಹ ಎಂಟ್ರಿ ಕೊಡುತ್ತಿದ್ದಂತೆಯೇ ಮತ್ತೊಂದೆಡೆ ಅಲ್ಲು ಅರ್ಜುನ್ ಬ್ಲಾಕ್ ಕಲರ್ ಟ್ರೆಡಿಶನಲ್ ಸೂಟ್ ಧರಿಸಿ ಕಾರಿನಿಂದ ಇಳಿದು ಆಗಮಿಸುತ್ತಾರೆ. ಬಳಿಕ ಇಬ್ಬರು ಒಟ್ಟಿಗೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್
ಒಟ್ಟಾರೆ ಅಲ್ಲು ಅರ್ಜುನ್ ಹಾಗೂ ಸ್ನೇಹ ದಂಪತಿಯ ಈ ಕ್ಯೂಟ್ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಇದೇ ಡಿಸೆಂಬರ್ 25ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.