ಬೆಂಗಳೂರು: ನನಗೆ ಈ ಕಾರ್ಯಕ್ರಮ ಇಷ್ಟೂ ಬೇಗ ಪ್ರಾರಂಭವಾಗುತ್ತೆ ಎಂದು ತಿಳಿದಿರಲಿಲ್ಲ. ನಿಮ್ಮನ್ನು ಕಾಯಿಸಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ವೇದಿಕೆಯ ಮೇಲೆಯೇ ಕೇಳಿದ್ದಾರೆ.
‘ಪುಷ್ಪ’ ಸಿನಿಮಾದ ಸುದ್ದಿಗೋಷ್ಠಿಯನ್ನು ಇಂದು ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಆದರೆ ಈ ವೇಳೆ ಅಲ್ಲು ಅರ್ಜುನ್ ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದರು. ಈ ವೇಳೆ ಸುದ್ದಿಗೋಷ್ಠಿ 11 ಗಂಟೆಗೆ ಇತ್ತು. ಆದರೆ ನೀವು 2 ಗಂಟೆಗೆ ಬಂದಿದ್ದೀರಾ, ನಾವು 3 ಗಂಟೆಗಳ ಕಾಲ ನಿಮಗಾಗಿ ಕಾದಿದ್ದೇವೆ ಎಂದು ಪ್ರಶ್ನೆ ಕೇಳಲಾಯಿತು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್
Advertisement
Advertisement
ಈ ವೇಳೆ ಅಲ್ಲು ಅರ್ಜುನ್ ಅವರು ವೇದಿಕೆ ಮೇಲೆಯೇ, ನನಗೆ ಇಷ್ಟು ಬೇಗ ಸುದ್ದಿಗೋಷ್ಠಿ ಇರುತ್ತೆ ಎಂದು ತಿಳಿದಿರಲಿಲ್ಲ. ನಾವು ಬರುವಾಗ ಹವಾಮಾನ ವೈಪರೀತ್ಯದಿಂದ ವಿಮಾನ ಸ್ವಲ್ಪ ತಡವಾಯಿತು. ಅದಕ್ಕೆ ನಿಮ್ಮನ್ನು ಕಾಯಿಸಬೇಕಾಗಿ ಬಂತು. ನನ್ನನ್ನು ಕ್ಷಮಿಸಿ ಎಂದು ಹೇಳಿದರು.
Advertisement
ಕನ್ನಡ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ಅವರು, ನನ್ನ ಸಿನಿಮಾ ಮಾತ್ರವಲ್ಲ. ತೆಲುಗು ಸಿನಿಮಾಕ್ಕೆ ನೀವು ನೀಡುತ್ತಿರುವ ಬೆಂಬಲಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಕನ್ನಡ ಮೀಡಿಯಾದವರು ನಮ್ಮ ಸಿನಿಮಾಗಳಿಗೂ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ ಅದಕ್ಕೆ ನಾನು ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
Advertisement
ನಾನು ಚಿಕ್ಕವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ನೋಡುತ್ತಿದ್ದಾಗ ಯಾವತ್ತು ನಾನು ಒಂದು ಸಿನಿಮಾವನ್ನು ತೆಗೆಯುತ್ತೇನೆ. ಬೆಂಗಳೂರಿನಲ್ಲಿ ರಿಲೀಸ್ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಕನಸಿನಲ್ಲಿಯೂ ಈ ಒಂದು ದಿನ ಬರುತ್ತೆ ಎಂದು ನಾನು ಎಂದು ನಾನು ತಿಳಿದುಕೊಂಡಿರಲಿಲ್ಲ. ಕರ್ನಾಟಕ ಜನರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಕನಸಿನಲ್ಲಿಯೂ ತಿಳಿದುಕೊಂಡಿರಲಿಲ್ಲ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದರು
ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾತನಾಡಿದ ಅವರು, ರಶ್ಮಿಕಾ ಅವರು ನನಗೆ ತುಂಬಾ ಇಷ್ಟವಾದ ಹುಡುಗಿ. ನ್ಯಾಷನಲ್ ಕ್ರಶ್ ಆಗಿರುವ ಅವರು ಕನ್ನಡ ಸಿನಿಮಾದಲ್ಲಿ ಮಾತ್ರವಲ್ಲ ತೆಲುಗು, ತೆಮಿಳು, ಹಿಂದಿ ಎಲ್ಲ ಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದು ಎಲ್ಲ ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯವಾಗಿದೆ. ಕರ್ನಾಟಕವನ್ನು ರಶ್ಮಿಕಾ ಎಲ್ಲ ಭಾಷೆಗಳಲ್ಲಿಯೂ ಪ್ರತಿಬಿಂಬಿಸುತ್ತಿದ್ದಾರೆ. ಅವರು ಇಷ್ಟು ದೊಡ್ಡ ನಟಿಯಾಗಿರುವುದು ಎಲ್ಲ ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯವಾಗಿದೆ. ಏಕೆಂದರೆ ಯಾರಾದರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಅವರನ್ನು ನೋಡಿ ಆ ಹುಡುಗಿಯ ಊರು ಯಾವುದು ಎಂದು ಕೇಳುತ್ತಾರೆ. ಅಂತಹ ಕೆಲಸವನ್ನು ರಶ್ಮಿಕಾ ಮಾಡುತ್ತಿದ್ದಾರೆ ಎಂದು ಹೊಗಳಿದರು.
ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಎಲ್ಲ ಕಲಾವಿದರಿಗೂ ನನ್ನ ಧನ್ಯವಾದಗಳು. ನಮ್ಮ ನಿರ್ದೇಶಕರು ಸುಕುಮಾರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರು ಅದು ಕಮ್ಮಿಯಾಗುತ್ತೆ. ಇಂತಹ ಅದ್ಭುತ ಪಾತ್ರವನ್ನು ನನಗೆ ನೀಡಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು. ಇಡೀ ‘ಪುಷ್ಪ’ ತಂಡಕ್ಕೆ ಧನ್ಯವಾದಗಳು ಎಂದರು. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್
ಕನ್ನಡದ ಯುವರತ್ನ ಪುನೀತ್ ರಾಜ್‍ಕುಮಾರ್ ಅವರು ಸಾವನ್ನಪ್ಪಿದ್ದಾಗ ನಾನು ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಎಲ್ಲರೂ ‘ಪುಷ್ಟ’ ಸಿನಿಮಾಗಾಗಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ನಾನು ಈ ಸಿನಿಮಾ ರಿಲೀಸ್ ಆದ ಮೇಲೆ ಮತ್ತೆ ಇಲ್ಲಿಗೆ ಬರುತ್ತೇನೆ. ಇಲ್ಲಿ ಬಂದು ಅವರ ಕುಟುಂಬವನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.