ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ `ಆರ್‌ಆರ್‌ಆರ್’ (RRR Film) ದೂರದ ಜಪಾನ್‌ನಲ್ಲಿ ಪ್ರಥಮ ಪ್ರದರ್ಶನ ಕಂಡ ಬೆನ್ನಲ್ಲೇ ಇದೀಗ `ಪುಷ್ಪ’ (Pushpa) ಚಿತ್ರದ ಪ್ರಿಮಿಯರ್ ಪ್ರದರ್ಶನಕ್ಕಾಗಿ ಮಾಸ್ಕೋಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ (Rashmika Mandanna) ಹಾರಿದ್ದಾರೆ. ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಬಗ್ಗೆ ಆಕ್ರೋಶ ಹೊರಹಾಕಿರುವ ಬೆನ್ನಲ್ಲೇ ನಟಿ ವಿದೇಶಕ್ಕೆ ಹಾರಿದ್ದಾರೆ.
Advertisement
`ಪುಷ್ಪ ದಿ ರೈಸ್’ ಟಾಲಿವುಡ್ ಮಾತ್ರವಲ್ಲದೇ ಬಹುಭಾಷೆಯಲ್ಲಿ ಈ ಸಿನಿಮಾ ಕಮಾಲ್ ಮಾಡಿತ್ತು. ಜೊತೆಗೆ ಕೋಟಿ ಕೋಟಿ ಲೂಟಿ ಮಾಡಿ, ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೀಗ `ಆರ್‌ಆರ್‌ಆರ್’ ಚಿತ್ರದ ಹಾದಿಯಲ್ಲೇ `ಪುಷ್ಪ ದಿ ರೈಸ್’ ಚಿತ್ರತಂಡ ಹೆಜ್ಜೆ ಇಡುತ್ತಿದೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ರಾಜಮೌಳಿ ನಿರ್ದೇಶನದ ಚಿತ್ರ `ಆರ್‌ಆರ್‌ಆರ್’ ಪ್ರದರ್ಶನವಾಗಿತ್ತು. ಇದೀಗ ದೂರದ ಮಾಸ್ಕೋದಲ್ಲಿ ಪುಷ್ಪ ಚಿತ್ರದ ಪ್ರಿಮಿಯರ್ ಪ್ರದರ್ಶನವಾಗಲಿದೆ. ಇದನ್ನೂ ಓದಿ: ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್
Advertisement
Team #PushpaTheRise Landed in Russia ????????
Meet the team at the Russian language Special premieres on Dec 1st at Moscow & Dec 3rd at St. Petersburg ????????#PushpaInRussia from Dec 8th ????
Icon Star @alluarjun @iamRashmika @aryasukku @ThisIsDSP @MythriOfficial @4SeasonsCreati1 pic.twitter.com/Mt6xucws4h
— Pushpa (@PushpaMovie) November 30, 2022
Advertisement
ಡಿಸೆಂಬರ್ 1ರಂದು ಮಾಸ್ಕೋದಲ್ಲಿ ರಷ್ಯನ್ ಭಾಷೆಯಲ್ಲಿ `ಪುಷ್ಪ’ ತೆರೆಕಾಣಲಿದೆ. ಈ ಸಿನಿಮಾಗಾಗಿ ಪುಷ್ಪ ಮತ್ತು ಶ್ರೀವಲ್ಲಿ ಮಾಸ್ಕೋದಲ್ಲಿ ಈಗಾಗಲೇ ಬೀಡು ಬಿಟ್ಟಿದ್ದಾರೆ. ಚಿತ್ರತಂಡಕ್ಕೆ ಮಾಸ್ಕೋ ಜನರು ವೆಲ್‌ಕಮ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
Advertisement
`ಪುಷ್ಪ’ ಸಿನಿಮಾ ರಷ್ಯನ್ ಭಾಷೆಯಲ್ಲಿ ಡಬ್ ಆಗಿದೆ. ಡಿಸೆಂಬರ್ 1ಕ್ಕೆ ಪ್ರದರ್ಶನವಾಗುತ್ತಿರುವ ಈ ಚಿತ್ರವನ್ನು ಮಾಸ್ಕೋ ಚಿತ್ರಪ್ರೇಮಿಗಳು ಅಪ್ಪಿ ಒಪ್ಪಿಕೊಳ್ಳತ್ತಾರಾ ಎಂಬುದನ್ನ ಕಾದುನೋಡಬೇಕಿದೆ.