ಬೆಂಗಳೂರು: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಪರಿಗೆ ಸದನ ಒಂದು ಕ್ಷಣ ಹಾಸ್ಯದ ಹೊನಲಲ್ಲಿ ತೇಲಿತು.
ವಿಧಾನಸಭೆಯಲ್ಲಿ ಹಿಜಬ್ ಕುರಿತು ಮಾತನಾಡುವಾಗ ಸಿದ್ದರಾಮಯ್ಯ ಅವರು, ಶಲ್ಯವನ್ನು ಹಿಂದೆ, ಮುಂದೆ ಮಾಡಿ ಸಿದ್ದರಾಮಯ್ಯ ಅವರು ತೋರಿಸಿದ ಪರಿಯನ್ನು ಕಂಡು ಎಲ್ಲರೂ ನಕ್ಕರು. ಅದನ್ನು ನೋಡಿ ಸಿದ್ದರಾಮಯ್ಯ ಅವರೂ ನಗೆ ಬೀರಿದರು. ಇದನ್ನೂ ಓದಿ: ಹಿಜಬ್‍ಗೂ ಪರೀಕ್ಷೆಗೂ ಸಂಬಂಧವಿಲ್ಲ, ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ
Advertisement
Advertisement
ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ. ಹಿಜಬ್ ಬಗ್ಗೆ ನಾನು ಮಾತನಾಡಲ್ಲ. ಮುಸ್ಲಿಂ ಧರ್ಮಗುರುಗಳು ನನ್ನನ್ನು ಭೇಟಿಯಾಗಿದ್ದರು. ಹಿಜಬ್ ಬದಲು ದುಪಟ್ಟಾ ಹಾಕಿಕೊಳ್ಳಲು ಅವಕಾಶ ಕೊಡಿ ಎಂದಿದ್ದಾರೆ. ಯೂನಿಫಾರ್ಮ್ ಕಲರ್ ಅನ್ನೇ ದುಪಟ್ಟಾ ಮಾಡಿ ಹಾಕಿಕೊಳ್ಳಲು ಅವಕಾಶ ಕೊಡಿ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಲಿ. ವಿದ್ಯಾರ್ಥಿಗಳು ಶಾಲೆಗೂ ಬರುತ್ತಾರೆ, ಪರೀಕ್ಷೆ ಬರೆಯುತ್ತಾರೆ ಎಂದು ಮನವಿ ಮಾಡಿದರು.
Advertisement
ವಿದ್ಯಾರ್ಥಿಯೊಬ್ಬಳು ದುಪಟ್ಟಾ ಹಾಕಿರೋ ಫೋಟೋ ತೋರಿಸಿದ ಸಿದ್ದರಾಮಯ್ಯ, ಈ ರೀತಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ತನ್ನ ಶಲ್ಯವನ್ನು ತೋರಿಸಿ, ನಾನು ಈ ರೀತಿ ಹಾಕಿದ್ದೇನೆ. ಅವರಿಗೆ ಈ ರೀತಿ ಹಾಕಲು ಅವಕಾಶ ಮಾಡಿಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು
Advertisement
ಇದೇ ವೇಳೆ ಮಧ್ಯಪ್ರವೇಶ ಮಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಾವೆಲ್ಲಾ ಪ್ರಯತ್ನ ಮಾಡಿದ್ದೇವೆ. ನೀವು ಅವರನ್ನು ಮನವೊಲಿಸಿ ಸರ್. ಹಿಜಬ್ ಧರಿಸದೇ ತರಗತಿಗೆ ಬನ್ನಿ ಎಂದು ನಾವು ಮನವೊಲಿಸುವ ಪ್ರಯತ್ನ ಮಾಡಿ ವಿಫಲರಾಗಿದ್ದೇವೆ. ನೀವು ಮನವರಿಕೆ ಮಾಡಿ, ಅವರು ನಿಮ್ಮ ಮಾತು ಕೇಳ್ತಾರೆ. ಶಿಕ್ಷಣಕ್ಕಿಂತ ಧರ್ಮ ಮುಖ್ಯವೆಂದು ಅವರು ನಮಗೆ ಹೇಳಿದ್ದಾರೆಂದು ನೆನೆಪಿಸಿದರು.
ಈಗ ನೀವು ಪ್ರಯತ್ನ ಮಾಡಿ ಸರ್ ಎಂದ ನಾಗೇಶ್ ನುಡಿದರು. ನನ್ನ ಸಲಹೆಯನ್ನು ಪರಿಗಣಿಸಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಅದಕ್ಕೆ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ. ಇದನ್ನೂ ಓದಿ: ಹೈಕೋರ್ಟ್ ಜಡ್ಜ್‌ಗೆ ಬೆದರಿಕೆ – ತನಿಖೆ ಚುರುಕುಗೊಳಿಸಿದ ಪೊಲೀಸರು