ಬೀದರ್: ಲೋಕಸಭಾ ಚುನಾವಣೆಗಾಗಿ (Lok Sabha Election) ಬಿಜೆಪಿ (BJP) ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್‌ನಲ್ಲಿ (JDS) ಅಸಮಾಧಾನ ಸ್ಫೋಟ ವಿಚಾರಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ (Bandeppa Kashempur) ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆಗೆ ನಾವು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಕ್ಕೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ದೇವೇಗೌಡರು (Devegowda) ಹಾಗೂ ಕುಮಾರಸ್ವಾಮಿ (Kumaraswamy) ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಒಬ್ಬರು ಇಬ್ಬರು ಅಸಮಾಧಾನವಾಗಿದ್ದು ಅವರ ಜೊತೆಗೆ ಉಪಾಧ್ಯಕ್ಷರು ರಾಜೀನಾಮೆ ಕೊಟ್ಟಿದ್ದಾರೆ. ಎಲ್ಲರನ್ನು ಕುಮಾರಸ್ವಾಮಿ ಸಮಾಧಾನ ಮಾಡುತ್ತಾರೆ ಎಂದರು.
Advertisement
Advertisement
ಸ್ಥಳೀಯ ಮಟ್ಟದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತದೆ. ಅದನ್ನೂ ಕುಮಾರಸ್ವಾಮಿ ಸರಿಪಡಿಸುತ್ತಾರೆ. ನಾಳೆ ಬೆಂಗಳೂರಿನಲ್ಲಿ ಯಾವುದೇ ಅತೃಪ್ತರ ಸಭೆ ಇಲ್ಲ. ಅವರು ವೈಯಕ್ತಿಕ ಸಭೆ ಮಾಡಿದರೂ ನಾನು ಸಭೆಗೆ ಹೋಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿದೇಶದಲ್ಲಿರುವ ಖಲಿಸ್ತಾನ್ ಉಗ್ರರಿಗೆ ಶಾಕ್ – OCI Card ರದ್ದು
Advertisement
ನಮ್ಮಲ್ಲಿ ಹೆಚ್‌ಡಿಡಿ ಹಾಗೂ ಹೆಚ್‌ಡಿಕೆ ಸಭೆ ಮಾತ್ರ ಇರುತ್ತದೆ. ಮೊದಲು ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಕೊಟ್ಟಿದ್ದೇ ದೇವೇಗೌಡರು ಎಂದು ತಿಳಿಸಿದರು.
Advertisement
Web Stories