– ಡಿ.2ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ
ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ (Guarantee Scheme) ಹಣ ನೀಡೋ ಬರದಲ್ಲಿ ಉಳಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ ಅನ್ನೋ ಆರೋಪಗಳು ಮತ್ತೊಮ್ಮೆ ಕೇಳಿಬಂದಿದೆ.
Advertisement
ಈಗ ಸರ್ಕಾರ ಅಂಗವಿಕಲರ ಅನುದಾನಕ್ಕೂ (Grant for the disabled) ಕೊಕ್ಕೆ ಹಾಕಿದ್ದು ಕಳೆದ ವರ್ಷಕ್ಕಿಂತ 80% ರಷ್ಟು ಅನುದಾನ ಕಡಿತ ಮಾಡಿದೆ ಅಂತಾ ವಿಕಲಚೇತರ ಫೆಡರೇಷನ್ ಧ್ವನಿ ಎತ್ತಿದೆ. ನಮ್ಮ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನ ನೀಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ನಮ್ಮ ಮನವಿಯನ್ನ ಪೂರೈಸದೆ ಹೋದ್ರೆ ಇದೇ ಡಿಸೆಂಬರ್ 2ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?
Advertisement
Advertisement
ಈ ಕುರಿತು ರಾಷ್ಟ್ರೀಯ ವಿಕಲಚೇತನರ ಫೆಡರೇಷನ್ ಕರ್ನಾಟಕ ಶಾಖೆಯ ವ್ಯವಸ್ಥಾಪಕ ಹೇಮಂತ್ ʻಪಬ್ಲಿಕ್ ಟಿವಿʼಜೊತೆಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ನೀಡುವ ಬರದಲ್ಲಿ ಅಂಗವಿಕಲರಿಗೆ ಅನ್ಯಾಯ ಮಾಡ್ತಿದೆ. ರಾಜ್ಯದಲ್ಲಿರೋ ಅಂಗವಿಕಲರು ಸೇವಾಸಿಂಧು ಮೂಲಕ ಅನುದಾನಕ್ಕೆ ಅರ್ಜಿ ಹಾಕಿದ್ರೂ ಅನುಕೂಲವಾಗ್ತಿಲ್ಲ, ವ್ಹೀಲ್ ಚೇರ್ ಆಗಿರಬಹುದು, ಲ್ಯಾಪ್‌ಟ್ಯಾಪ್ ಆಗಿರಬಹುದು ಹೀಗೆ ಎಲ್ಲ ಸ್ಕೀಮ್‌ಗೂ ತೊಡಕಾಗಿದೆ. ಈ ಬಗ್ಗೆ ಸಿಎಂ, ಡಿಸಿಎಂಗೂ ಮನವಿ ಮಾಡಿದ್ದೇವೆ. ಇದೇ ಡಿಸೆಂಬರ್ 3 ಅಂಗವಿಕಲರ ದಿನಾಚರಣೆ ಇದೆ. ಸರ್ಕಾರ ಡಿಸೆಂಬರ್ 2ರೊಳಗೆ ಅನುದಾನ ನೀಡದೇ ಹೋದ್ರೇ ಅಂದಿನಿಂದಲೇ ಪ್ರತಿಭಟನೆ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: Davanagere| ವಿದ್ಯುತ್ ಅವಘಡಕ್ಕೆ ಒಂದೂವರೆ ಎಕರೆ ಅಡಿಕೆ ತೋಟ ಸುಟ್ಟು ಕರಕಲು
Advertisement
ಸರ್ಕಾರ ಕಳೆದ ವರ್ಷ 40 ಕೋಟಿ ರೂ. ಅನುದಾನ ಕೊಟ್ಟಿದೆ. ಆದ್ರೆ ಈ ವರ್ಷ ಕೇವಲ 10 ಕೋಟಿ ರೂ. ಕೊಟ್ಟಿದ್ದು, ಶೇ.80 ರಷ್ಟು ಅನುದಾನ ಕಡಿತಗೊಳಿಸಿದೆ. ಆದ್ರೆ ಗ್ಯಾರಂಟಿಗಳಿಗೆ 58,000 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಗಳನ್ನ ನೀಡುತ್ತಿಲ್ಲ, ಗ್ಯಾರಂಟಿ ಸ್ಕೀಂನಿಂದ ಸರ್ಕಾರಕ್ಕೆ ಹಣದ ಕೊರತೆ ಉಂಟಾಗಿ, ನಮ್ಮ ಯೋಜನೆಗಳಿಗೆ ಕತ್ತರಿ ಹಾಕಿರಬಹುದು. ಕೆಲ ವರ್ಷಗಳಿಂದ ಯೋಜನೆ ಮುಂದುವರಿಸಿಕೊಂಡು ಬರಲಾಗ್ತಿದೆ. ಹೊಸ ಯೋಜನೆಗಳನ್ನ ಘೋಷಿಸಿಲ್ಲ. ಕಳೆದ ವರ್ಷ 54 ಕೋಟಿ ರೂ. ವೆಚ್ಚದಲ್ಲಿ 4 ಸಾವಿರ ವೆಹಿಕಲ್ ನೀಡಿದ್ರು, 400 ಲ್ಯಾಪ್‌ಟಾಪ್ ಅಂಧ ವಿದ್ಯಾರ್ಥಿಗಳಿಗೆ ನೀಡಿದ್ರು. 183 ಬ್ರೈಲ್ ಕಿಟ್ ಕೊಟ್ಟಿದ್ದಾರೆ. ಈ ವರ್ಷದ ಅನುದಾನದಲ್ಲಿ 350 ವೆಹಿಕಲ್ ಕೊಡಬಹುದು, 30 ಲ್ಯಾಪ್‌ಟಾಪ್, 130 ಬ್ರೈಲ್ ಕಿಟ್ ನೀಡಬಹುದು. ಆದ್ರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಲ್ಲಾ ಶಾಸಕರಿಗೆ ಮನವಿ ಕೊಟ್ಟಿದ್ದೆ, ಅವರೂ ಸ್ಪಂದಿಸಿಲ್ಲ. ಹಾಗಾಗಿ ಡಿಸೆಂಬರ್ 2ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
2023-24ರ ವರ್ಷದಲ್ಲಿ ಬಿಡುಗಡೆಯಾದ ಅನುದಾನ?
ಯೋಜನೆ- ಹಣ ಬಿಡುಗಡೆ- ಫಲಾನುಭವಿಗಳ ಸಂಖ್ಯೆ
1. ಯಂತ್ರಚಾಲಿತ ದ್ವಿಚಕ್ರವಾಹನ – 3980 ಲಕ್ಷ ರೂ – 4000 ಫಲಾನುಭವಿಗಳು
2. ಟಾಕಿಂಗ್ ಲ್ಯಾಪ್‌ಟಾಪ್ – 397.43 ಲಕ್ಷ ರೂ. – 411 ಫಲಾನುಭವಿಗಳು
3. ಬ್ಯಾಟರಿ ಆಪರೇಟಿವ್ ವ್ಹೀಲ್‌ಚೇರ್ – 499.20 ಲಕ್ಷ ರೂ. – 520 ಫಲಾನುಭವಿಗಳು
4. ಬ್ರೈಲ್‌ಕಿಟ್ – 44.03 ಲಕ್ಷ ರೂ. – 183 ಫಲಾನುಭವಿಗಳು
5. ಹೊಲಿಗೆ ಯಂತ್ರ – 19.95 ಲಕ್ಷ ರೂ. – 179 ಫಲಾನುಭವಿಗಳು
6. ಸಾಧನ ಸಲಕರಣೆ – 145.34ಲಕ್ಷ ರೂ. – 266 ಫಲಾನುಭವಿಗಳು
2024-25ನೇ ಸಾಲಿನಲ್ಲಿ ಸರ್ಕಾರ ಮೀಸಲಿಟ್ಟ ಅನುದಾನ & ಸಲ್ಲಿಕೆಯಾಗಿರುವ ಅರ್ಜಿಗಳು
1. ಯಂತ್ರಚಾಲಿತ ದ್ವಿಚಕ್ರವಾಹನ – 350 ಲಕ್ಷ ರೂ. – ಅರ್ಜಿಗಳ ಸಂಖ್ಯೆ – 9,744
2. ಟಾಕಿಂಗ್ ಲ್ಯಾಪ್‌ಟಾಪ್ – 30 ಲಕ್ಷ ರೂ. – ಅರ್ಜಿಗಳ ಸಂಖ್ಯೆ 553
3. ಬ್ಯಾಟರಿ ಆಪರೇಟೆಡ್ ವ್ಹೀಲ್‌ಚೇರ್ – ಅರ್ಜಿಗಳ ಸಂಖ್ಯೆ 350
4. ಬ್ರೈಲ್‌ಕಿಟ್ – 35 ಲಕ್ಷ ರೂ. – ಅರ್ಜಿಗಳ ಸಂಖ್ಯೆ 311
5. ಹೊಲಿಗೆ ಯಂತ್ರ – 25 ಲಕ್ಷ ರೂ. – ಅರ್ಜಿಗಳ ಸಂಖ್ಯೆ 862
6. ಸಾಧನ ಸಲಕರಣೆ – 100 ಲಕ್ಷ ರೂ. – ಅರ್ಜಿಗಳ ಸಂಖ್ಯೆ 5,173