ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

Public TV
2 Min Read
Asit Modi

ಳೆದ ತಿಂಗಳು ಹೆಸರಾಂತ ಧಾರಾವಾಹಿಯ ನಟಿಯೊಬ್ಬರು ಅದೇ ಧಾರಾವಾಹಿಯ ನಿರ್ಮಾಪಕನ (Producer) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ನಿರ್ಮಾಪಕ ಅಸಿತ್ ಮೋದಿ, ಆಪರೇಷನ್ ಹೆಡ್ ಸೊಹೈಲ್ ರಮಣಿ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 509ರ ಅಡಿಯಲ್ಲಿ ಎಫ್.ಐ.ಆರ್ (F.I.R) ದಾಖಲಿಸಿದ್ದಾರೆ.

Taarak Mehta Ka Ooltah Chashmah 1

ಸತತ ಹದಿನೈದು ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ (Tarak Mehta Ka Ulta Chashma) ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ (Asit Kumar Modi) ಹಾಗೂ ಮತ್ತಿಬ್ಬರು ತಮಗೆ ಲೈಂಗಿಕ ಕಿರುಕುಳ ಹಾಗೂ ತಮ್ಮೊಂದಿಗೆ ದುರ್ವತನೆ ತೋರಿದ್ದಾರೆ ಎಂದು ನಟಿ ಆರೋಪಿಸಿದ್ದರು. ಇದನ್ನೂ ಓದಿ:ರಾಮ್ ಚರಣ್ ಮಗುವಿಗೆ ‘ನಾಟು ನಾಟು’ ಗಾಯಕನಿಂದ ಸ್ಪೆಷಲ್ ಗಿಫ್ಟ್

Taarak Mehta Ka Ooltah Chashmah 3

ಈ ಆರೋಪವನ್ನು ನಿರ್ಮಾಪಕಿ ಮೋದಿ ಅಲ್ಲಗಳೆದಿದ್ದು, ತಾವು ಯಾವತ್ತಿಗೂ ಯಾರೊಂದಿಗೆ ಆ ರೀತಿಯಲ್ಲಿ ವರ್ತನೆ ಮಾಡಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿ ಮುಂಬೈ ಪೊಲೀಸ್ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಪ್ರಾಜೆಕ್ಟ್ ಹೆಡ್ ಸೋಹಾಲಿ ರೊಮಾನಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ಹೆಸರನ್ನು ಉಲ್ಲೇಖಿಸಿದ್ದಾರೆ.

Taarak Mehta Ka Ooltah Chashmah 2

ಈ ಧಾರಾವಾಹಿಯಲ್ಲಿ ನಟಿಯು ಮಾರ್ಚ್ 6ರಂದು ಕೊನೆಯ ಬಾರಿಗೆ ನಟಿಸಿದ್ದಾರೆ. ಮಾರ್ಚ್ 7 ರಂದು ಹೋಳಿಹಬ್ಬವಿದ್ದ ಕಾರಣದಿಂದಾಗಿ ಎರಡು ಗಂಟೆಗಳ ಕಾಲ ನಟಿ ಬ್ರೇಕ್ ಕೇಳಿದ್ದರಂತೆ. ಇತರ ನಟರಿಗೆ ಕೊಟ್ಟರೂ ತಮಗೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ನಿರ್ಮಾಪಕರಿಗೂ ನಟಿಗೂ ಜಗಳ ಆಗಿತ್ತು. ಅದನ್ನೆ ನೆಪವಾಗಿಟ್ಟುಕೊಂಡು ಲೈಂಗಿಕ ಆರೋಪ ಮಾಡಿದ್ದಾರೆ ಎನ್ನುವುದು ನಿರ್ಮಾಪಕರ ವಾದ.

 

ಆದರೆ, ಆ ನಟಿ ಹೇಳುವುದು ಬೇರೆ. ಸುಖಾಸುಮ್ಮನೆ ಮೈಮುಟ್ಟಲು ಬರುತ್ತಿದ್ದರಂತೆ. ಸಿಂಗಾಪುರದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ರೂಮ್ ಗೆ ಆಹ್ವಾನ ಮಾಡಿದ್ದರಂತೆ. ಇದು ತಮ್ಮ ಅನುಭವ ಮಾತ್ರವಲ್ಲ, ಇತರ ನಟಿಯರಿಗೂ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಈ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

Share This Article