ಡೆಹ್ರಾಡೂನ್: ಬಲವಂತದ ಮತಾಂತರ (Conversion) ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು 30 ಯುವಕರ ಗುಂಪೊಂದು ಕ್ರಿಸ್ಮಸ್ ಆಚರಣೆ (Christmas Celebrations) ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರಾಖಂಡದ (Uttarakhand0 ಉತ್ತರಕಾಶಿ (Uttarkashi) ಜಿಲ್ಲೆ ಪುರೊಲಾ ಗ್ರಾಮದಲ್ಲಿ ನಡೆದಿದೆ.
ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದವರ ಮೇಲೆ ಯುವಕರ ಗುಂಪು ದೊಣ್ಣೆ ಹಿಡಿದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅವರು ಹಿಂದೂ ಸಂಘಟನೆಯವರು ಎಂದು ಹೇಳಿಕೊಂಡಿದ್ದು, ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಹಾಗೂ ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದ್ದು, ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್
Advertisement
Advertisement
Advertisement
ರಾಜ್ಯ ರಾಜಧಾನಿ ಡೆಹ್ರಾಡೂನ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಗ್ರಾಮದ ಹೋಪ್ ಮತ್ತು ಲೈಫ್ ಸೆಂಟರ್‌ನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ದಾಳಿ ನಡೆದಿದೆ. ಮನ್ಸೂರಿಯ ಯೂನಿಯನ್ ಚರ್ಚ್‌ಗೆ ಸೇರಿದ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
Advertisement
ರಾಜ್ಯದ ಬಿಜೆಪಿ ಸರ್ಕಾರ ಇತ್ತೀಚೆಗೆ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಿದೆ. ಶನಿವಾರ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದುಕೊಂಡಿದೆ.