– ಕುಮಾರಸ್ವಾಮಿ ಹೇಳಿದ ಮಹಾನಾಯಕ ಇವರೇ ಇರಬೇಕು ಎಂದ ನವೀನ್‌ಗೌಡ
– ನವೀನ್ ಗೌಡ ಯಾರು ಅಂತಾನೇ ಗೊತ್ತಿಲ್ಲ ಎಂದ ಶಾಸಕ
ಹಾಸನ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ (Prajwal Revanna Pendrive Case) ಎಸ್‌ಐಟಿ ಬಿಗ್ ಟ್ವಿಸ್ಟ್ ನೀಡಿದೆ. ಪೆನ್‌ಡ್ರೈವ್ ವೈರಲ್ ಮಾಡಿದ ಆರೋಪದ ಚೇತನ್, ಲಿಖಿತ್ ಹೆಸರಿನ ಇಬ್ಬರನ್ನು ಎಸ್‌ಐಟಿ ಅರೆಸ್ಟ್ ಮಾಡಿದೆ. ಇದೇ ಹೊತ್ತಿನಲ್ಲಿ ಪೆನ್‌ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ (Naveen Gowda) ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪೋಸ್ಟ್ ಭಾರೀ ಸಂಚಲನ ಸೃಷ್ಟಿಸಿದೆ.
Advertisement
ಕಳೆದ ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಅರಕಲಗೂಡಿನಲ್ಲಿ ಶಾಸಕ ಎ.ಮಂಜುಗೆ (A Manju) ಕೊಟ್ಟಿದ್ದೆ. ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಪೆನ್‌ಡ್ರೈವ್ ಕೊಟ್ಟಿದ್ದೆ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ ಹಾಗೆ ಪೆನ್‌ಡ್ರೈವ್ ಹಂಚಿಕೆ ಮಾಡಿದ ಮಹಾನನಾಯಕ ಇವರೇ ಇರಬಹದು ಎಂದು ನವೀನ್‌ಗೌಡ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಲ್ಲದೇ ಹೆಚ್.ಡಿ ದೇವೇಗೌಡ, ಹೆಚ್‌ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರೊಂದಿಗೆ ಎ. ಮಂಜು ಅವರು ಇರುವ ಫೋಟೋವೊಂದನ್ನು ಲಗತ್ತಿಸಿದ್ದಾರೆ. ಇದನ್ನೂ ಓದಿ: ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ
Advertisement
Advertisement
ತಮ್ಮ ಮೇಲಿನ ಈ ಆರೋಪವನ್ನು ಎ.ಮಂಜು ಅಲ್ಲಗಳೆದಿದ್ದಾರೆ. ನನ್ನನ್ನು ಅವನು ಭೇಟಿ ಮಾಡಿಲ್ಲ. ಅವನನ್ನು ನಾನು ನೋಡಿಯೇ ಇಲ್ಲ. ಅವನು ನನಗೆ ಪರಿಚಯವೇ ಇಲ್ಲ. `ಪಬ್ಲಿಕ್ ಟಿವಿ’ ನೋಡಿದಾಗ ವಿಷಯ ಗೊತ್ತಾಯ್ತು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ; ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಕಾಂಗ್ರೆಸ್ ಅಭ್ಯರ್ಥಿ
Advertisement
ತಾನು ಬಚಾವ್ ಆಗಲು ನವೀನ್‌ಗೌಡ ಇಂತಹ ಥರ್ಡ್ಕ್ಲಾಸ್ ಆರೋಪ ಮಾಡಿದ್ದಾನೆ. ಪ್ರಕರಣದ ದಾರಿ ತಪ್ಪಿಸಲು ಹೀಗೆ ಮಾಡಿದ್ದಾರೆ. ಜೆಡಿಎಸ್ ಮುಗಿಸಲು ಸಂಚು ನಡೆದಿರುವಂತೆ ಕಾಣ್ತಿದೆ. ಯರ‍್ಯಾರನ್ನೋ ಎಸ್‌ಐಟಿ ಬಂಧಿಸಿದೆ ಆದ್ರೆ ನವೀನ್‌ಗೌಡನನ್ನ ಏಕೆ ಬಂಧಿಸಿಲ್ಲ. ನನಗೆ ಈಗ ದೂರು ಕೊಡಲು ಅನುಕೂಲ ಆಯ್ತು. ನಾನು ನವೀನ್ ಗೌಡ ವಿರುದ್ಧ ದೂರು ಕೊಟ್ಟೇ ಕೊಡುತ್ತೇನೆ ಎಂದು ಮಂಜು ಹೇಳಿದ್ದಾರೆ.