ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಶಾಸಕ ಸಾ.ರಾ.ಮಹೇಶ್ 1,500 ಪುಟಗಳಷ್ಟು ದಾಖಲೆಗಳನ್ನ ಸಲ್ಲಿಸಿದ್ದಾರೆ.
Advertisement
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಕರ್ತವ್ಯ ಲೋಪ ಎಸಗಿದ ಆರೋಪ ಸಂಬಂಧ ತನಿಖೆ ಆರಂಭವಾಗಿದೆ. ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಅಬಕಾರಿ ಇಲಾಖೆಯ ಆಯುಕ್ತ ಡಾ.ಜೆ ರವಿಶಂಕರ್ ನೇತೃತ್ವದಲ್ಲಿ ಮೈಸೂರು ಡಿಸಿ ಕಚೇರಿಯ ಸಭಾಂಗಣದಲ್ಲಿ ತನಿಖೆ ನಡೆಯುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಈ ಹಿಂದೆ ಪ್ರಕರಣಗಳ ತನಿಖೆ ಸಂಬಂಧ ಡಾ.ಜೆ.ರವಿಶಂಕರ್ ಅವರು ಶಾಸಕ ಸಾ.ರಾ.ಮಹೇಶ್ ಅವರಿಗೆ ನೋಟಿಸ್ ನೀಡಿದ್ದರು. ಇದೀಗ ತನಿಖಾಧಿಕಾರಿ, ರವಿಶಂಕರ್ ಅವರಿಗೆ ಶಾಸಕರು 1,500 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಡ್ ನೈಟ್ ಕಾಯಿಲ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವು
Advertisement
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು 30 ದಿನದಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯುತ್ತದೆ. ಈ ಪ್ರಕರಣದಲ್ಲಿ ನಾನು ಮಾಡಿದ್ದ ಎಲ್ಲಾ ಆರೋಪಕ್ಕೂ ದಾಖಲೆಗಳನ್ನು ನೀಡಿದ್ದೇನೆ. ಐಎಎಸ್ ಅಧಿಕಾರಿಯನ್ನ ಅಮಾನತು ಮಾಡಬೇಕಾಗಿದೆ. ನನಗೆ ತನಿಖೆಯ ಮೇಲೆ ವಿಶ್ವಾಸವಿದೆ. ನಾನು ಯಾವ ದುರುದ್ದೇಶದಿಂದಲೂ ಈ ಆರೋಪಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್
Advertisement
ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ದುರುದ್ದೇಶದ ಭೂ ಅಕ್ರಮ ಆರೋಪ ಮಾಡಿದ್ದರು. ಈ ತನಿಖೆಯ ವರದಿ ಬಂದ ಮೇಲೆ ಜನರಿಗೆ ಆ ಅಧಿಕಾರಿಯ ನಿಜ ಬಣ್ಣ ಗೊತ್ತಾಗಲಿದೆ. ಆ ಐಎಎಸ್ ಅಧಿಕಾರಿಯ ಬಣ್ಣ ಬಯಲು ಮಾಡುವುದೇ ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.