ಕಾರವಾರ: ಗುಡ್ ನೈಟ್ ಕಾಯಿಲ್ನ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.
ಆರವ್ ಮಹೇಶ್ ನಾಯ್ಕ (2) ಸಾವನ್ನಪ್ಪಿರುವ ಮಗು. ಮನೆಯಲ್ಲಿ ನೆಲದ ಮೇಲೆ ಇಟ್ಟಿದ್ದ ಸೊಳ್ಳೆ ಓಡಿಸುವ ಗುಡ್ ನೈಟ್ ಲಿಕ್ವಿಡ್ ಕಾಯಿಲ್ನಲ್ಲಿ ಆಟವಾಡುತ್ತ ಮಗು ತೆಗೆದುಕೊಂಡು ಕುಡಿದು ಅಸ್ವಸ್ಥಗೊಂಡಿತ್ತು. ಇದನ್ನೂ ಓದಿ: ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಹಾಕಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ತಕ್ಷಣ ಮಗುವನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚೇತರಿಕೆ ಕಾಣದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಇದನ್ನೂ ಓದಿ: ಹಾಡಹಗಲೇ ಮೆಡಿಕಲ್ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ