ದಸರಾ ಆನೆ ಅರ್ಜುನ (Arjuna Elephant) ಸಾವನ್ನಪ್ಪಿ 5 ತಿಂಗಳೂ ಕಳೆದರೂ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಗುತ್ತಿಲ್ಲ. 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಮಾಧಿ ವಿಚಾರವನ್ನೇ ಬಂಡವಾಳ ಮಾಡಿಕೊಂಡು ನಾನು ನಟ ದರ್ಶನ್ (Actor Darshan) ಅಭಿಮಾನಿ ಎಂದು ಹೇಳಿಕೊಂಡು ಓರ್ವ ವ್ಯಕ್ತಿ ಅಕ್ರಮವಾಗಿ ಹಣ ಸಂಗ್ರಹಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್ ಎಂಬುವನು ‘ಅರ್ಜುನ ಪಡೆ ಕರ್ನಾಟಕ’ ಎಂಬ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ, ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತ ಹಣಕ್ಕಾಗಿ ಸಂಗ್ರಹಿಸಿದ್ದಾರೆ. ನವೀನ್ ಹೆಚ್.ಎನ್ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿರುವ ಬಗ್ಗೆ ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಆರೋಪ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ದರ್ಶನ್ ಫ್ಯಾನ್ಸ್ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್
ನವೀನ್‌ರನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ನವೀನ್ ಅಕೌಂಟ್‌ಗೆ ನೂರಾರು ಜನರಿಂದ ಹಣ ಸಂದಾಯ ಆಗಿರುವ ಸ್ಕ್ರೀನ್ ಶಾಟ್‌ಗಳು ವೈರಲ್ ಆಗುತ್ತಿದೆ. ದರ್ಶನ್ ಹೆಸರು ಹೇಳಿ ಅಕ್ರಮ ಹಣ ಪಡೆದಿದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದರ್ಶನ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.