ನವದೆಹಲಿ: ದೇಶದ ಹಬ್ಬ ಗಣರಾಜೋತ್ಸವ ಆಚರಣೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ದೆಹಲಿಯ ರಾಜಪಥ್ ರಸ್ತೆ ಶನಿವಾರದ ಕಾರ್ಯಕ್ರಮಕ್ಕೆ ನವವಧುವಿನಂತೆ ಸಿಂಗಾರಗೊಂಡಿದೆ.
ಬೆಳಗ್ಗೆ ಹತ್ತು ಗಂಟೆಯಿಂದ ಅಧಿಕೃತ ಕಾರ್ಯಕ್ರಮ ಆರಂಭವಾಗಲಿದ್ದು ಅಂತಿಮ ಹಂತದ ಕೆಲಸಗಳು, ಭದ್ರತಾ ತಪಾಸಣೆ ಕಾರ್ಯ ನಡೆಯುತ್ತಿದೆ. ಬೆಳಗ್ಗೆ ಹತ್ತು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಬಾರಿಯ ಅತಿಥಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮ್ಫೂಸಾ ಸಮ್ಮುಖದಲ್ಲಿ ಇಂಡಿಯಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಹುತ್ಮಾತ ಯೋಧರಿಗೆ ಗೌರವ ವಂದನೆ ಸಲ್ಲಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ಮಾಡಲಿದ್ದಾರೆ.
Advertisement
Advertisement
ಬೆಳಗ್ಗೆ 10.30ರಿಂದ ಪರೇಡ್ ಗೆ ಅಧಿಕೃತ ಚಾಲನೆ ಸಿಗಲಿದ್ದು, ಮಹಾತ್ಮ ಗಾಂಧಿ 150ನೇ ಜನ್ಮ ದಿನ ಹಿನ್ನೆಲೆಯಲ್ಲಿ ಸ್ತಬ್ಧ ಚಿತ್ರಗಳ ಮೂಲಕ ವಿಶೇಷ ಗೌರವ ಸಲ್ಲಿಸಲು ತಯಾರಿ ನಡೆದಿದೆ. 17 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವಾಲಯದಿಂದ ಗಾಂಧಿಗೆ ಗೌರವ ಸಲ್ಲಿಸಲಾಗುತ್ತಿದೆ. ಇದನ್ನು ಓದಿ: ಫಸ್ಟ್ ಟೈಂ ಆರ್‌ಡಿಯಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳಾ ಅಧಿಕಾರಿ
Advertisement
ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜೋತ್ಸವದ ಮೇಲೆ ಉಗ್ರರ ಕರಿನೆರಳಿದ್ದು ಜೈಶ್ ಈ ಮೊಹ್ಮದ್ ಉಗ್ರ ಸಂಘಟನೆಯ ಶಂಕಿತ ಇಬ್ಬರು ಉಗ್ರರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ರಾಜಪಥ್ ನಿಂದ ಐದು ಕಿಮೀ ವರೆಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು ಪಾಸ್ ಇದ್ದವರು ಮಾತ್ರ ಜನಪಥ್ ರಸ್ತೆ ಪ್ರವೇಶಿಸಬಹುದಾಗಿದೆ. ವೇದಿಕೆ ಸುತ್ತಲೂ ಮೂರು ಬಗೆಯ ಭದ್ರತೆ ಒದಗಿಲಾಗಿದ್ದು ಎಸ್ಪಿಜಿ, ಬ್ಲಾಕ್ ಕ್ಯಾಟ್ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರಿಗೆ ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್ ನಿಂದ ಭದ್ರತೆ ನೀಡಲಾಗಿದೆ.
Advertisement
ಹೇಗೆ ಪರೇಡ್ ಆರಂಭಗೊಳ್ಳುತ್ತದೆ?
ಶನಿವಾರ ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಲಿದ್ದಾರೆ. ಬಳಿಕ 9.55ಕ್ಕೆ ಕುದುರೆ ಸಾರೋಟಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಮಿಸಿ ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಿ ಯುದ್ಧದಲ್ಲಿ ಹುತ್ಮಾತರಾದ ಸೈನಿಕರಿಗೆ ಗೌರವ ವಂದನೆ ಸಲ್ಲಿಸಲಿದ್ದಾರೆ. ಇದನ್ನು ಓದಿ: ರಾಜಪಥ್ ರಸ್ತೆಯಲ್ಲಿ ಮೊದಲ ಬಾರಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು
ರಾಷ್ಟ್ರಪತಿಗಳು 10 ಗಂಟೆಗೆ ಪ್ರಧಾನಿ ಸಮ್ಮುಖದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ವೇಳೆ ದೇಶದ ಭೂ, ವಾಯು ಮತ್ತು ನೌಕದಳದ ಮುಖ್ಯಸ್ಥರು ಉಪಸ್ಥಿತರಿರಲಿದ್ದಾರೆ. 10.30ಕ್ಕೆ ಅಧಿಕೃತವಾಗಿ ಪರೇಡ್‍ಗೆ ಆರಂಭವಾಗುವ ಸಾಧ್ಯತೆಯಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್ ವರೆಗೆ ಒಟ್ಟು ನಾಲ್ಕು ಕಿಮೀ ದೂರ ಹಾಗೂ ಮೂರು ಗಂಟೆಗಳ ಕಾಲ ಪರೇಡ್ ನಡೆಯಲಿದೆ.
ವಿಶೇಷವಾಗಿ ಮಹಾತ್ಮ ಗಾಂಧೀಜಿ ಭೇಟಿ ಕೊಟ್ಟ ನೆನಪುಗಳನ್ನು ತೋರಿಸಲು 17 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶ ಗಾಂಧೀಜಿಗೆ ಸಂಬಂಧಿಸಿದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.
ಪರೇಡ್ ವಿಶೇಷತೆಗಳು: ಭಾರತೀಯ ಸೇನೆಗೆ ಅವಳವಡಿಸಿಕೊಂಡಿರುವ ಅಮೇರಿಕಾದ ಎಂ777 ಎ2 ಆರ್ಟಿಲರಿ ಗನ್ ಈ ಬಾರಿ ಪರೇಡ್ ವಿಶೇಷ ಪ್ರದರ್ಶನವಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿರುವ ಕೆ9 ವಜ್ರಾ ಆರ್ಟಿಲರಿ ಗನ್ ಕೂಡ ಪ್ರದರ್ಶನವಾಗಲಿದೆ. ಇದನ್ನು ಓದಿ: ಮೋದಿ ಜೊತೆ ಗಣರಾಜ್ಯೋತ್ಸವ ವೀಕ್ಷಿಸಲು ಬೆಂಗ್ಳೂರು ವಿದ್ಯಾರ್ಥಿನಿಗೆ ಬಂತು ಆಹ್ವಾನ
ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಮಧ್ಯಮ ಶ್ರೇಣಿಯ ಏರ್ ಮಿಸೈಲ್, ಅರ್ಜುನಾ ಟ್ಯಾಂಕ್ ಗಳ ರಕ್ಷಣೆಗೆಂದು ನಿರ್ಮಾಣಗೊಂಡಿರುವ ಅರ್ಮರ್ಡ್ ರಿಕವರಿ ವೆಹಿಕಲ್ (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಕೂಡಾ ಮೊದಲ ಬಾರಿಗೆ ಪ್ರದರ್ಶನ ಮಾಡಲಾಗುತ್ತಿದೆ. ಬಯೋ ಇಂಧನ ಸಾಮರ್ಥ್ಯದಿಂದ ಮೊದಲ ಬಾರಿಗೆ ಹಾರಾಟ ನಡೆಸಲಿರುವ ಎಎನ್ – 32 ವಿಮಾನ ಪರೇಡಿನ ಮತ್ತೊಂದು ವಿಶೇಷವಾಗಿದೆ.
ನೇತಾಜಿ ಸುಭಾಸ್ ಚಂದ್ರಬೋಸ್ ಅವರ ಐಎನ್‍ಎ ದಳದಲ್ಲಿದ್ದ ನಾಲ್ವರು ಯೋಧರು ಇದೆ ಮೊದಲ ಬಾರಿಗೆ ಪರೇಡ್ ನಲ್ಲಿ ಭಾಗಿಯಾಗುತ್ತಿದ್ದು, ಭಾರತೀಯ ಸೇನೆಯ ಮೂರು ದಳಗಳಿಗಾಗಿ ಸಿದ್ಧಪಡಿಸಲಾಗಿರುವ ಶಂಖನಾದ ಹೆಸರಿನ ವಿಶೇಷ ಟ್ಯೂನ್ ಈ ವೇಳೆ ಬಳಕೆ ಮಾಡಲಾಗುತ್ತದೆ. ಮೊದಲ ಬಾರಿಗೆ ಮಹಿಳಾ ಶಕ್ತಿಯ ಪ್ರದರ್ಶನ ನಡೆಯಲಿದ್ದು, ಮೇಜರ್ ಕುಸುಬು ಕನ್ವಾಲ್ ನೇತೃತ್ವದಲ್ಲಿ ದೇಶದ ಅತಿ ಪುರಾತನ ಪ್ಯಾರಾಮಿಲಿಟರಿ ಫೋರ್ಸ್ ಅಸ್ಸಾಂ ರೈಫಲ್ಸ್ ಅನ್ನು ಮುನ್ನಡೆಸಲಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿಯಾದ ಕ್ಯಾಪ್ಟನ್ ಶಿಖಾ ಸುರಭಿ ಅವರು ಸೇನೆಯ ಡೇರ್ ಡೇವಿಲ್ಸ್ ಮೋಟಾರ್ ಸೈಕಲ್ ತಂಡದಲ್ಲಿ ಪುರುಷ ಸದಸ್ಯರ ಜೊತೆ ಸೇರಿ ಪ್ರದರ್ಶನ ನೀಡಲಿದ್ದಾರೆ. ಇದನ್ನು ಓದಿ: ಪ್ರಧಾನಿ ಮೋದಿ ಆಹ್ವಾನ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ
ಗಣರಾಜೋತ್ಸವದ ಮುಖ್ಯ ಅತಿಥಿಯಾಗಿ ದಕ್ಷಿಣಾ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮ್ಪೂಸಾ ಆಗಮಿಸಲಿದ್ದು, ನಲ್ಸೇನ್ ಮಂಡೇಲಾ ಬಳಿಕ ದಕ್ಷಿಣ ಆಫ್ರಿಕಾದಿಂದ ಗಣರಾಜೋತ್ಸದಲ್ಲಿ ಭಾಗಿಯಾಗಿರುತ್ತಿರುವ ಎರಡನೇ ಅಧ್ಯಕ್ಷರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv