ಬೆಂಗಳೂರು: ಇನ್ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದರೆ 1 ಲಕ್ಷ ರೂ. ದಂಡ ಮತ್ತು ಕ್ರಿಮಿನಲ್ ಕೇಸ್ ಬೀಳಲಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ನೈರ್ಮಲ್ಯತೆ ಮತ್ತು ಸೌಂದರ್ಯದ ದೃಷ್ಟಿಯಿಂದ ಫ್ಲೆಕ್ಸ್, ಬ್ಯಾನರ್‍ಗಳ ಮೇಲೆ ಹೈಕೋರ್ಟ್ ಪ್ರಹಾರ ನಡೆಸಿದ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ ಮತ್ತಷ್ಟು ಎಚ್ಚೆತ್ತುಕೊಂಡಿದೆ.
2015ರಲ್ಲೇ ಫ್ಲೆಕ್ಸ್, ಬ್ಯಾನರ್‍ಗಳನ್ನ ಪರಿಸರ ಇಲಾಖೆ ಬ್ಯಾನ್ ಮಾಡಿದೆ. ಆದಾಗ್ಯೂ, ಅನಧಿಕೃತವಾಗಿ ಫ್ಲೆಕ್ಸ್, ಭಿತ್ತಿಚಿತ್ರಗಳನ್ನ ಹಾಕಲಾಗ್ತಿದೆ. ಹಾಗಾಗಿ, ಅಂಥವರ ಮೇಲೆ ಕ್ರಮ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ. ಇಂದು ನಡೆದ ಬಿಬಿಎಂಪಿಯಲ್ಲಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಯಾವೆಲ್ಲ ನಿರ್ಣಯ ಕೈಗೊಳ್ಳಲಾಗಿದೆ?
ಮರ, ಗೋಡೆಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ. ಭಿತ್ತಿ ಪತ್ರ ಅಂಟಿಸಿದ್ರೆ 1 ಲಕ್ಷವರೆಗೆ ದಂಡ, ಕ್ರಿಮಿನಲ್ ಕೇಸ್ ದಾಖಲು, ಭಿತ್ತಿಪತ್ರದ ಜೊತೆಗೆ ಎಲೆಕ್ಟ್ರಿಕ್ ಸೀರಿಯಲ್ ಸೆಟ್ ಇದ್ದರೂ ದಂಡ ಹಾಕಲಾಗುತ್ತದೆ.
ಖಾಸಗಿ ಜಾಗದಲ್ಲಿನ ಹೋರ್ಡಿಂಗ್ಸ್‍ಗಳು ಕಾನೂನಿಗೆ ವಿರುದ್ಧವಾಗಿದ್ದು ಇವುಗಳನ್ನು ಹಾಕಿದವರೇ ಆದಷ್ಟು ಬೇಗ ತೆಗೆಸಬೇಕು. ಮುಂದಿನ 15 ದಿನಗಳಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್ ತೆರವುಗೊಳಿಸದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಇರುವ ಯಾವುದೇ ಹೋರ್ಡಿಂಗ್ಸ್ ಅಧಿಕೃತವಲ್ಲ. ಹೋರ್ಡಿಂಗ್ಸ್ ತೆಗೆಸದಿದ್ದರೆ 6 ತಿಂಗಳವರೆಗೆ ಜೈಲು ಅಷ್ಟೇ ಅಲ್ಲದೇ ಮುದ್ರಣಾಕಾರರು, ಪೋಸ್ಟರ್‍ನಲ್ಲಿ ಇರುವವರ ಮೇಲೆ ಕೇಸ್ ಹಾಕಲಾಗುತ್ತದೆ. ಆದರೆ ಬಸ್ ಶೆಲ್ಟರ್‍ನಲ್ಲಿ ಹಾಕಿರುವ ಹೋಲ್ಡಿಂಗ್ಸ್‍ಗೆ ಪಾಲಿಕೆಯಿಂದ ಅನುಮತಿ ಇದೆ.
https://www.youtube.com/watch?v=3ptmTVS1Cbs
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews