ಬೆಂಗಳೂರು: ಸರ್ಕಾರದ ವಿಶೇಷ ಅಭಿಯೋಜಕರ (SPP) ರಿಮ್ಯಾಂಡ್ ಅರ್ಜಿಯಲ್ಲಿ ಸ್ಪಷ್ಟತೆಯಿರಲಿಲ್ಲ. ಅಲ್ಲದೇ ಅಭಿಯೋಜಕರು ಮಂಡಿಸಿದ ವಾದದಲ್ಲಿ ಯಾವುದೂ ಎ2 ಆರೋಪಿಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಎಲ್ಲ ಆರೋಪಗಳನ್ನು ದರ್ಶನ್ (Darshan) ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ದರ್ಶನ್ ಪರ ವಕೀಲ ಅನಿಲ್ ಬಾಬು ತಿಳಿಸಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಎ2 ಆರೋಪಿ ದರ್ಶನ್ (Accused Darshan) ಪರ ವಕೀಲರು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದರು. ಸರ್ಕಾರದ ವಿಶೇಷ ಅಭಿಯೋಜಕರ ರಿಮ್ಯಾಂಡ್ ಅರ್ಜಿಯಲ್ಲಿ ಸ್ಪಷ್ಟತೆಯಿರಲಿಲ್ಲ. ಅಲ್ಲದೇ ಅಭಿಯೋಜಕರು ಮಂಡಿಸಿದ ವಾದದಲ್ಲಿ ಯಾವುದೂ ಎ2 ಆರೋಪಿಗೆ ಸಂಬಂಧಿಸಿದ್ದಲ್ಲ. ಆದ ಕಾರಣ ಎಲ್ಲ ಆರೋಪಗಳನ್ನು ದರ್ಶನ್ ಅವರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಲಕಾವೇರಿ, ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಯದುವೀರ್
ಆರೋಪಿಗಳ ಮೊಬೈಲ್ ಡೇಟಾಗಳನ್ನ ರಿಟ್ರೀವ್ (Mobile Data Retrieve) ಮಾಡಬೇಕು. ಮೃತದೇಹ ಪತ್ತೆಯಾದ ಸ್ಥಳದಲ್ಲಿದ್ದ ಆರೋಪಿಗಳ ಬಟ್ಟೆ, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು. ಜೊತೆಗೆ ರೇಣುಕಾಸ್ವಾಮಿ ಹತ್ಯೆಗೆ ಎಲೆಕ್ಟ್ರಿಕ್ ಶಾಕಿಂಗ್ ಮಿಷಿನ್ ಬಳಸಿದ್ದಾರೆ. ಅದನ್ನು ವಶಪಡಿಸಿಕೊಳ್ಳಬೇಕು. ಜೊತೆಗೆ ಆರೋಪಿಗಳ ವಾಟ್ಸಪ್ ಚಾಟ್ ಡಿಟೇಲ್ಸ್ ರಿಟ್ರೀವ್ ಮಾಡಬೇಕು. ಅದಕ್ಕಾಗಿ ಆರೋಪಿಗಳು ಪಾಸ್‌ವರ್ಡ್ ನೀಡಬೇಕು ಎಂಬುದು ಅಭಿಯೋಜಕರ ಮುಖ್ಯವಾದವಾಗಿತ್ತು. ಅದಕ್ಕಾಗಿ 9 ದಿನಗಳ ಕಾಲ ವಿಚಾರಣೆಗೆ ಅವಕಾಶ ಮಾಡಿಕೊಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ನಟ ದರ್ಶನ್, ಪವಿತ್ರಾ ಗೌಡ ಸೇರಿ 12 ಆರೋಪಿಗಳು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ
ಅಲ್ಲದೇ ವಿಶೇಷ ಅಭಿಯೋಜಕರ ರಿಮ್ಯಾಂಡ್ ಅರ್ಜಿಯಲ್ಲಿ ಸ್ಪಷ್ಟತೆ ಇರಲಿಲ್ಲ. ಯಾವ ಆರೋಪಿಗಳಿಂದ ಏನು ವಸ್ತು? ವಾಟ್ಸಪ್ ಚಾಟ್? ಬಟ್ಟೆ ವಶಪಡಿಸಿಕೊಳ್ಳಬೇಕು? ಎಲೆಕ್ಟ್ರಿಕ್ ಮಿಷನ್ ಯಾರಿಂದ ವಶಕ್ಕೆ ಪಡೆಯಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ಅಭಿಯೋಜಕರ ವಾದಕ್ಕೆ ನಮ್ಮ ತಕರಾರು ಇತ್ತು. ಯಾವುದೇ ಆರೋಪಿಗಳಿಂದ ಬಲವಂತವಾಗಿ ಮೊಬೈಲ್ ಪಾಸ್‌ವರ್ಡ್‌ಗಳನ್ನು ಪಡೆದು ಡೇಟಾ ರಿಟ್ರೀವ್ ಮಾಡೋದಕ್ಕೆ ಅವಕಾಶ ಇಲ್ಲ. ಅದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೋರ್ಟ್ ನೀಡಿದ್ದ ಆದೇಶಗಳನ್ನು ಉಲ್ಲೇಖಿಸಿ ತಕರಾರು ಮಂಡಿಸಿದೆವು. ನಮ್ಮ ವಾದವನ್ನು ನ್ಯಾಯಾಲಯ ಮಾನ್ಯಮಾಡಿತು. ಹಾಗಾಗಿ 9 ದಿನಗಳ ಬದಲಿಗೆ 5 ದಿನ ಮಾತ್ರ ವಿಚಾರಣೆಗೆ ಅವಕಾಶ ಮಾಡಿಕೊಟ್ಟಿತು ಎಂದು ತಿಳಿಸಿದರು.
ಇನ್ನೂ ಎ6 ಆರೋಪಿ ಜಗ್ಗ, ಎ7 ಆರೋಪಿ ಅನುಕುಮಾರ್ ಪರ ವಕೀಲ ಹೆಚ್.ಬಿ ಶಿವರಾಜು ಮಾತನಾಡಿ, ಆರೋಪಿಯ ತಂದೆ ಅಂತ್ಯಕ್ರಿಯೆಗೆ ಕೋರ್ಟ್ ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನೂ ಇಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ಕಸ್ಟಡಿಯಲ್ಲಿರುವಾಗ ಅವರ ಭೇಟಿಗೆ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್