ಬೆಂಗಳೂರು: ಸಿಸಿಬಿ (CCB) ವಿಚಾರಣೆ ವೇಳೆ ಕುಸಿದು ಬಿದ್ದಿದ್ದ ಚೈತ್ರಾ ಕುಂದಾಪುರ (Chaitra Kundapur) ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆ ಚೈತ್ರಾ ಅವರ ಹೆಲ್ತ್ ಬುಲೆಟಿನ್ ಅನ್ನು ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿದ್ದಾರೆ.
ಚೈತ್ರಾರ ಆರೋಗ್ಯ ಸ್ಥಿರವಾಗಿದೆ. ರಕ್ತದ ವರದಿ, ಇಸಿಜಿ ಸೇರಿ ಹಲವು ಪರೀಕ್ಷೆಗಳ ವರದಿ ನಾರ್ಮಲ್ ಆಗಿದೆ. ಬ್ರೈನ್ ಕೂಡ ನಾರ್ಮಲ್ ಆಗಿದೆ. ಟ್ರಾಮ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ ಐಸಿಯುನಲ್ಲಿ ಅವರನ್ನು ನಿಗಾದಲ್ಲಿಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಸಿಸಿಬಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾಗ ಚೈತ್ರಾ ಟಾಯ್ಲೆಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ರಾತ್ರಿ ಹೊಟ್ಟೆ ತುಂಬಾ ಊಟ ಮಾಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಚೈತ್ರಾ ಮಲಗಿದ್ದರು. ಬೆಳಗ್ಗೆ ಎದ್ದು 1 ಗಂಟೆ ಯೋಗ, ಧ್ಯಾನ ಸಹ ಮಾಡಿದ್ದರು. ಯೋಗ ಮುಗಿದ ಬಳಿಕ ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!
ಟೆನ್ಷನ್ ಹೆಚ್ಚಾದಾಗ ಈ ಹಿಂದೆ ಕೂಡಾ ಪ್ರಜ್ಞೆ ಕಳೆದುಕೊಂಡು ಚೈತ್ರಾ ಬಿದ್ದಿದ್ದರು ಎನ್ನಲಾಗಿದೆ. ಭಾಷಣ ಮಾಡುವ ಸಂದರ್ಭದಲ್ಲಿ ಈ ಹಿಂದೆ ಸುಸ್ತಾಗಿ ಬಿದ್ದಿರೊ ಇತಿಹಾಸ ಇದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಇಲ್ಲ: ಬಾಲಾಜಿ ಪೈ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]