ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಚರ್ಚೆ ನಡೆಸಲು ಇದೇ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
Advertisement
ವಿಧಾನಸಭೆಯಲ್ಲಿ ಮಾತಾಡಿದ ಸಿಎಂ, ಮೇಕೆದಾಟು ಯೋಜನೆಯ ಡಿಪಿಆರ್, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿದೆ. ಜೊತೆಗೆ ಕೇಂದ್ರದ ಪರಿಸರ ಇಲಾಖೆಯ ಅನುಮತಿ ಬೇಕಾಗಿದೆ. ಇದರ ಮಧ್ಯೆ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ಬಗ್ಗೆ ಚರ್ಚಿಸಲು ಈ ವಾರದಲ್ಲೇ ಸರ್ವ ಪಕ್ಷ ಸಭೆ ಕರೆಯುತ್ತೇನೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಐದು ವಲಯಗಳಲ್ಲಿ ಟೌನ್‍ಶಿಪ್ ನಿರ್ಮಾಣ: ಮುರುಗೇಶ್ ನಿರಾಣಿ
Advertisement
ನಮಗೂ ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭ ಆಗಬೇಕು ಅನ್ನೋದಿದೆ. ಎಲ್ಲರ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದು ಸಭೆಗೆ ಸಿಎಂ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತಮಿಳುನಾಡಿನವರು ರಾಜಕೀಯಕ್ಕಾಗಿ ಕೋರ್ಟ್‌ಗೆ ಹೋಗಿದ್ದಾರೆ. ಅದರ ಬಗ್ಗೆ ಸುಪ್ರೀಂ ಕೋರ್ಟ್ ಯಾವ ಆದೇಶವನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರವೇ ಮೇಕೆದಾಟು ಕೋರ್ಟ್‌ನಲ್ಲಿದೆ ಎನ್ನುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದರು. ಅವತ್ತು ಶೇಖಾವತ್ ಇದನ್ನು ಹೇಳಿದ್ದು ಸುದ್ದಿಗೋಷ್ಠಿಯಲ್ಲಿ. ನನ್ನ ಸಮ್ಮುಖದಲ್ಲಿ ಅಲ್ಲ ಅಂತಾ ಸಿಎಂ ಸಮಜಾಯಿಷಿ ನೀಡಿದರು.
Advertisement
Advertisement
ಮೇಕೆದಾಟು ಯೋಜನೆ ಜಾರಿ ಸಂಬಂಧ ಕಾಂಗ್ರೆಸ್ ಬೃಹತ್ ಪಾದಯಾತ್ರೆ ನಡೆಸಿದೆ. ಆ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಅತ್ತ ಕರ್ನಾಟಕ ಮೇಕೆದಾಟು ಡ್ಯಾಂ ನಿರ್ಮಿಸದಂತೆ ನೋಡಿಕೊಳ್ಳಿ ಎಂದು ಡಿಎಂಕೆ ಸರ್ಕಾರದ ಮೇಲೆ ಎಐಎಡಿಎಂಕೆ ಒತ್ತಡ ತರುತ್ತಿದೆ. ಇದನ್ನೂ ಓದಿ: ಸದನದಲ್ಲಿ ಸದ್ದು ಮಾಡಿದ ರೈತ ಮಹಿಳೆ ವಿಷ ಕುಡಿದ ಪ್ರಕರಣ