ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣ ನಾಲ್ವರು ದೋಷಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ ಮನವಿ ಮಾಡಿದೆ.
ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿದ ಬೆನ್ನಲ್ಲೇ ತಿಹಾರ್ ಜೈಲು ಆಡಳಿತ ಹಾಗೂ ದೆಹಲಿ ಸರ್ಕಾರ ಪಟಿಯಾಲ ಕೋರ್ಟ್ ಮೊರೆ ಹೋಗಿದ್ದು, ನಾಳೆ ಮಧ್ಯಾಹ್ನ ಎರಡು ಗಂಟೆಗೆ ಈ ಅರ್ಜಿಯ ವಿಚಾರಣೆ ನಡೆಯಲಿದೆ.
Advertisement
Advertisement
ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಜಾ ಆಗಿದ್ದು, ನಾಲ್ವರು ದೋಷಿಗಳ ಬಹುತೇಕ ಕಾನೂನು ಹೋರಾಟ ಅಂತ್ಯವಾಗಿದೆ. ಹಾಗಾಗಿ ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Advertisement
ಮಾರ್ಚ್ 3ರಂದು ಪಟಿಯಾಲಾ ಕೋರ್ಟ್ ಮೂರನೇ ಬಾರಿ ಡೆತ್ ವಾರೆಂಟ್ ಜಾರಿ ಮಾಡಿತ್ತು. ಆದರೆ ಕಡೆ ಘಳಿಗೆಯಲ್ಲಿ ದೋಷಿ ಪವನ್ ಗುಪ್ತಾ ರಾಷ್ಟ್ರಪತಿಗೆ ತಿರಸ್ಕೃತಗೊಂಡ ಕ್ಷಮದಾನ ಅರ್ಜಿ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ದಿಢೀರ್ ಬೆಳವಣಿಗೆಯಿಂದ ಮಾರ್ಚ್ 3ರಂದು ನಡೆಬೇಕಿದ್ದ ಗಲ್ಲು ಶಿಕ್ಷೆಗೆ ಪಟಿಯಾಲ ಕೋರ್ಟ್ ತಡೆ ನೀಡಿತ್ತು.