ಬೆಂಗಳೂರು: ನಮ್ಮ ಮನೆಯಲ್ಲೇ ಸಂಸ್ಕಾರ ಕಲಿಸಬೇಕು. ಎಲ್ಲ ಮುಸ್ಲಿಮರನ್ನ ಜಿಹಾದಿಗಳು ಎಂದು ಕರೆಯಲು ಆಗಲ್ಲ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ನಡೆದ ಆರ್‌ಎಸ್‌ಎಸ್ (RSS) 100 ವರ್ಷದ ಉಪನ್ಯಾಸ ಕಾರ್ಯಕ್ರಮದ ಸಂವಾದದಲ್ಲಿ ಲವ್ ಜಿಹಾದ್ ಪ್ರಶ್ನೆಗೆ ಮೋಹನ್ ಭಾಗವತ್ ತೀಕ್ಷ್ಣ ಉತ್ತರ ಕೊಟ್ಟಿದ್ದಾರೆ. ಇನ್ನು 142 ಕೋಟಿ ಜನ ಒಟ್ಟಾದ್ರೆ ಹಿಂದೂ ರಾಷ್ಟ್ರ ಆಗಲಿದೆ, ಆಗುತ್ತೆ ಅಂದಿದ್ದಾರೆ. ಹಿಂದೂ ಹೆಣ್ಣು ಮಕ್ಕಳು ಕೆಲವು ಆಕರ್ಷಣೆ ಒಳಗಾಗಿ, ಮೂರ್ಖರಾಗುತ್ತಿದ್ದಾರೆ. ನಮ್ಮ ಮನೆಯಲ್ಲೇ ಸಂಸ್ಕಾರ ಕಲಿಸಬೇಕು. ಲವ್ ಜಿಹಾದ್‌ಗೆ ಒಳಗಾಗದಂತೆ ಹೆಣ್ಣು ಮಕ್ಕಳು ಬೆಳೆಸಬೇಕು. ಇದರಿಂದ ಲವ್ ಜಿಹಾದ್ ಕೊನೆಯಾಗಲಿದೆ. ಎಲ್ಲಾ ಭಾರತೀಯ ಮುಸ್ಲಿಮರನ್ನು ಒಂದೇ ರೀತಿಯಲ್ಲಿ ನೋಡಲು ಆಗಲ್ಲ. ಎಲ್ಲಾ ಮುಸ್ಲಿಮರನ್ನು ಜಿಹಾದಿಗಳು ಅಂತ ಕರೆಯಲು ಆಗಲ್ಲ ಎಂದರು. ಇದನ್ನೂ ಓದಿ: ಬ್ರಿಟಿಷರ ಬಳಿ ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಬೇಕಿತ್ತಾ? – ಮೋಹನ್ ಭಾಗವತ್ ಸ್ಪಷ್ಟನೆ
142 ಕೋಟಿ ಜನ ಮನಸ್ಸು ಮಾಡಿದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಆಗಬಹುದು. ಯಾರು ಸಹ ಎಷ್ಟು ದಿನ ಬೇಕು ಅಂತ ಹೇಳಿಕೊಡುವುದಿಲ್ಲ. ಮುಂದೊಂದು ದಿನ ಹಿಂದೂ ರಾಷ್ಟ್ರ ಆಗೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ನಲ್ಲಿ ಆರ್‌ಎಸ್‌ಎಸ್ ಬಗ್ಗೆ ಎತ್ತಿದ್ದ ಹಲವು ಪ್ರಶ್ನೆಗಳಿಗೆ, ಕೆಲ ಹಿಂದುತ್ವದ ವಿಚಾರಗಳಿಗೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಉತ್ತರ ಕೊಟ್ಟಿದ್ದು, ಆರ್‌ಎಸ್‌ಎಸ್ ವಿರುದ್ಧ ಮಾತನಾಡೋರಿಗೆ ನಿರ್ಲಕ್ಷ್ಯವೇ ಮದ್ದು, ನಮ್ಮ ಕೆಲಸವೇ ಉತ್ತರ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಿಂದ ಕಂಗೆಟ್ಟ ಪಾಕ್ – ಸಂವಿಧಾನಕ್ಕೆ ತಿದ್ದುಪಡಿ ತಂದು ಆಸೀಮ್ ಮುನೀರ್‌ಗೆ ಪ್ರಮುಖ ಹುದ್ದೆ

