ಜಾವಾ ಬೈಕಿನ ಬಗ್ಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳು- ಜಾವಾ 42 ಬೈಕಿನ ಬೆಲೆ 1.55 ಲಕ್ಷ ರೂ. ಯಾಕೆ?

Public TV
3 Min Read
JAWA 22

80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ ರಸ್ತೆಗಳಿಗೆ ಇಳಿಯಲು ಸಿದ್ಧವಾಗಿದೆ. ಕಳೆದ ಗುರುವಾರ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಮೂರು ನೂತನ ಜಾವಾ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಬೈಕುಗಳು ತನ್ನ ಗತಕಾಲದ ವೈಭವವನ್ನೇ ಹೋಲುವ ರೀತಿಯಲ್ಲಿ ತಯಾರಾಗಿದೆ. ನೂತನ ಬೈಕುಗಳಾದ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಆವೃತ್ತಿಗಳು ಜಾವಾ ಪ್ರಿಯರ ನಿದ್ದೆಗೆಡಿಸಿದೆ.

ತನ್ನ ಹಳೆಯ ವಿನ್ಯಾಸದ ಹೋಲಿಕೆ:
ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಗಳಲ್ಲಿ ತನ್ನ ಹಳೆಯ ವಿನ್ಯಾಸವನ್ನೇ ಜಾವಾ ಕಂಪನಿ ಮುಂದುವರಿಸಿದೆ. ಪೆಟ್ರೋಲ್ ಟ್ಯಾಂಕ್, ಸ್ಪೀಡೋ ಮೀಟರ್, ಡ್ಯೂಮ್ ಕ್ಲಾಸಿಕ್ ಲುಕ್ ಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದೆ.

JAWA

ಹಳೇ ಜಾವಾಕ್ಕಿಂತಲೂ ವೇಗ ಜಾಸ್ತಿ ತೂಕ ಕಡಿಮೆ:
ಜಾವಾದ ಹಳೆಯ 500 ಸಿಸಿ ಮಾದರಿಯಲ್ಲಿನ ವೇಗಕ್ಕಿಂತಲೂ 293 ಸಿಸಿ ಎಂಜಿನ್ನಿನ ವೇಗ ಹೆಚ್ಚಿದೆ. ನೂತನ ಬೈಕುಗಳಲ್ಲಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಜೊತೆಗೆ 6ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಒಟ್ಟಾರೆ ಬೈಕಿನ ತೂಕ ಹಳೆಯ ಬೈಕಿಗೆ ಹೋಲಿಸಿದರೆ ಕಡಿಮೆಯಿದೆ.

ಆನಂದ್ ಮಹೀಂದ್ರರವರ ಹುಟ್ಟುಹಬ್ಬ ಸೂಚಿಸುವ ಬೈಕ್ ದರ:
ಮಹೀಂದ್ರದ ಮಾಲೀಕರಾಗಿರುವ ಆನಂದ್ ಮಹೀಂದ್ರರ ಹುಟ್ಟು ಹಬ್ಬವನ್ನೇ ಹೋಲಿಕೆಯಾಗುವ ರೀತಿಯಲ್ಲಿ ಜಾವಾ 42 ಬೈಕಿನ ಬೆಲೆಯನ್ನು ನಿಗದಿಪಡಿಸಿದೆ. ಮತ್ತೊಮ್ಮೆ ಭಾರತದಲ್ಲಿ ಜಾವಾ ಬೈಕುಗಳನ್ನು ಪರಿಚಯಿಸಲು ಕಾರಣವಾಗಿರುವ ಆನಂದ್ ಅವರಿಗೆ ಜಾವಾ ಈ ಮೂಲಕ ಗೌರವ ಸೂಚಿಸಿದೆ. ಆನಂದ್ ಮಹೀಂದ್ರಾ 1955ರ ಮೇ 1(01/05/1955) ರಂದು ಜನಿಸಿದ್ದರು. ಹೀಗಾಗಿ ಜಾವಾ 42 ಬೈಕಿನ ಬೆಲೆಯನ್ನು 1.55 ಲಕ್ಷ ರೂಪಾಯಿ ನಿಗದಿಪಡಿಸಿದೆ.

 ANAND

ನೂತನ ಜಾವಾ ಪರ್ಫಾರ್ಮೆನ್ಸ್ ಹೆಚ್ಚು:
ಜಾವಾ 42 ಬೈಕ್ 170 ಕೆಜಿ ತೂಕದೊಂದಿಗೆ 27 ಬಿಎಚ್‍ಪಿ ಜೊತೆ 29 ಎನ್‍ಎಂ ಟಾರ್ಕ್ ಉತ್ಪಾದಿಸುವ ಮೂಲಕ 158.8 ಬಿಎಚ್‍ಪಿ ಶಕ್ತಿಯನ್ನು ಹೊಂದಿದೆ. ಬಜಾಜ್‍ನ ಆರ್‍ಎಸ್200 160 ಕೆಜಿ ಹೊಂದಿದ್ದು, 24.5 ಬಿಎಚ್‍ಪಿಯೊಂದಿಗೆ 149.3 ಶಕ್ತಿಯನ್ನು ಮಾತ್ರ ಉತ್ಪಾದಿಸುತ್ತದೆ. ಯಾವುದೇ ರಾಯಲ್ ಎನ್‍ಫೀಲ್ಡ್ ಬೈಕುಗಳು ಇಷ್ಟು ವೇಗವನ್ನು ಪಡೆಯುವುದಿಲ್ಲ. ಇದನ್ನೂ ಓದಿ: ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ಜಾವಾ ಹೆಸರು ಬದಲಿಸದ ಮಹೀಂದ್ರ:
ಭಾರತದಲ್ಲಿ ಹೆಸರು ಮಾಡಿದ್ದ ಜಾವಾವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿರುವ ಮಹೀಂದ್ರ ನೂತನ ಬೈಕುಗಳಲ್ಲಿ ತನ್ನ ಹೆಸರನ್ನೇ ನಮೂದಿಸದೇ, ಹಳೆಯ ಮಾದರಿಯ ಹೆಸರನ್ನೇ ನೂತನ ಬೈಕುಗಳಿಗೆ ಮುಂದುವರಿಸಿಕೊಂಡು ಬಂದಿದೆ. ಬಿಡುಗಡೆಯ ಸಂದರ್ಭದಲ್ಲಿ ಮಹೀಂದ್ರ ಕಂಪನಿಯ ಸಿಇಒ ಆನಂದ್ ಹಾಗೂ ಜಾವಾದ ಅನುಪಮ್ ಥರೇಜಾ ಇದೇ ಹೆಸರನ್ನು ಸೂಚಿಸಿದ್ದಾರೆ.

DsBnBV1X4AAmvB6

ರಾಯಲ್ ಎನ್‍ಫೀಲ್ಡ್ ನ ಮಾಜಿ ನೌಕರರೇ ನೂತನ ಜಾವಾದ ರುವಾರಿಗಳು:
ಜಾವಾದ ಮುಖ್ಯಸ್ಥರಾಗಿರುವ ಅನುಪಯ್ ಥರೇಜಾ ಸೇರಿದಂತೆ ಆಶಿಶ್ ಜೋಶಿಯವರನ್ನು ಒಳಗೊಂಡ ಅನೇಕರು ರಾಯಲ್ ಎನ್‍ಫೀಲ್ಡ್ ಕಂಪನಿಯ ಮಾಜಿ ನೌಕರರಾಗಿದ್ದಾರೆ. ಅಲ್ಲದೇ ಆಶಿಶ್ ಜೋಶಿಯವರು ಕ್ಲಾಸಿಕ್ ಮಾದರಿಯ ಬೈಕ್ ಬಿಡುಗಡೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿಕೊಂಡಿದ್ದವರು.

ವಿಂಟೇಜ್ ಜಾವಾದ ನೂತನ ಮಾದರಿಯೇ ಪೆರಾಕ್:
ಜಾವಾ ಪೆರಾಕ್ ಅತಿ ಕಡಿಮೆ ಬೆಲೆಯ ಬಾಬಾರ್ ಮಾದರಿ ಬೈಕುಗಳಾಗಿದೆ. ಇದಲ್ಲದೇ ಜಾವಾದ ವಿಂಟೇಜ್ ಮಾದರಿಯನ್ನು ಪೆರಾಕ್ ಹೋಲುತ್ತಿದೆ. ಈ ಮಾದರಿಯನ್ನು ಜಾವಾ ಕೇವಲ ಅನಾವರಣಗೊಳಿಸಿದೆ. ಆದರೆ ಈ ಮಾದರಿಯ ಬೈಕುಗಳು 2019ರ ವೇಳೆಗೆ ಗ್ರಾಹಕರ ಕೈ ಸೇರಲಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

327744

ಜಾವಾ ಮತ್ತೆ ಎಂಟ್ರಿ ಕೊಟ್ಟಿದ್ದು ಹೇಗೆ?
22 ವರ್ಷಗಳ ನಂತರ ಯೆಜ್ಡಿ ಜಾವಾ ಮೋಟಾರ್‍ಸೈಕಲ್ ಕಂಪನಿ, ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಮತ್ತೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ, ಉದ್ಯಮಿ ಅನುಪಮ್ ಥರೇಜಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೊಮನ್ ಇರಾನಿಯವರ ಮೂವರು ತಂಡದಿಂದ ಜಾವಾ ಮತ್ತೆ ಭಾರತದಲ್ಲಿ ಅಬ್ಬರಿಸಲು ಮುಂದಾಗಿದೆ. ಅನುಪಮ್ ಥರೇಜಾ 2005 ರಿಂದ 2008ರವರೆಗೆ ರಾಯಲ್ ಎನ್‍ಫೀಲ್ಡ್‍ನಲ್ಲಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಇದಾದ ನಂತರ ಅವರು ಜಾವಾದ ಬೈಕುಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

Jawa Bike 2

ಮಾಹಿತಿಗಳ ಪ್ರಕಾರ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯಲ್ಲಿ ಒಟ್ಟಾರೆ ಶೇ.60ರಷ್ಟು ಶೇರನ್ನು ಮಹೀಂದ್ರ ಕಂಪನಿ ಹೊಂದಿದ್ದರೆ, ಉಳಿದ ಷೇರನ್ನು ಅನುಪಮ್ ಹಾಗೂ ಇರಾನಿ ಹೊಂದಿದ್ದಾರೆ. ಜಾವಾ ಬೈಕುಗಳು ಮಹೀಂದ್ರಾ ಘಟಕಗಳಲ್ಲೇ ನಿರ್ಮಾಣವಾಗುತ್ತಿದ್ದು, ಎಲ್ಲಾ ಸಂಶೋಧನೆ ಹಾಗೂ ತಂತ್ರಜ್ಞಾನಗಳು ಮಹೀಂದ್ರದ ಅಡಿಯಲ್ಲೇ ಸಿದ್ಧವಾಗಿದೆ.

Jawa Bike 5

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *