ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳ ನಡುವಿನ ನಾಕೌಟ್ ಕದನಕ್ಕೆ ಕೊನೆಗೂ ವರುಣ ಅಡ್ಡಿಯುಂಟುಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಬಿಡುವುಮಾಡಿಕೊಟ್ಟಿದ್ದಾನೆ. ಸುಮಾರು 15 ನಿಮಿಷಕ್ಕೂ ಅಧಿಕ ಸಮಯ ಸುರಿದ ಮಳೆ (Bengaluru Rains) ಇದೀಗ ಬಿಡುವುಕೊಟ್ಟಿದ್ದು, ಸದ್ಯದಲ್ಲೇ ಪಂದ್ಯ ಆರಂಭವಾಗಲಿದೆ.
ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಲೇ ಬಾರದು ಎಂದು ಆರ್‌ಸಿಬಿ ಅಭಿಮಾನಿಗಳು (RCB Fans) ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು, ದೇವರಲ್ಲಿ ಪ್ರಾರ್ಥಿಸಿದ್ದರು. ಆದ್ರೆ ಅಭಿಮಾನಿಗಳ ಆಸೆಗೂ ವರುಣ ತಣ್ಣೀರು ಎರಚಿದ್ದ. ಇದೀಗ ಪಂದ್ಯ ಪುನಾರಂಭವಾಗುತ್ತಿರುವುದು ಮತ್ತೆ ಅಭಿಮಾನಿಗಳಲ್ಲಿ ಉತ್ಸಾಹ ಚಿಗುರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಪ್ರಸ್ತಾಪ!
ಟಾಸ್ ಸೋತು ಕ್ರೀಸ್‌ಗಿಳಿದಿರುವ ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ. ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 3 ಓವರ್‌ಗಳಲ್ಲಿ 31 ರನ್ ಕಲೆಹಾಕಿರುವ ಆರ್‌ಸಿಬಿ ಪರ ಫಾಫ್ ಡು ಪ್ಲೆಸಿಸ್ 9 ಎಸೆತಗಳಲ್ಲಿ 12 ರನ್ ಗಳಿಸಿದ್ದರೆ, ಕೊಹ್ಲಿ 9 ಎಸೆತಗಳಲ್ಲಿ 19 ರನ್ ಚಚ್ಚಿದ್ದಾರೆ. ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿರುವುದರಿಂದ 18 ರನ್‌ಗಳ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಬಂದೊದಗಿದೆ.
ಸದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಹಬ್ಬದ ವಾತಾವರಣವೇ ನಿರ್ಮಾಣವಾಗಿದ್ದು, ಪ್ರತಿ ಎಸೆತವನ್ನು ಉಭಯ ತಂಡದ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಆಟಗಾರರು ಸಿಕ್ಸರ್, ಬೌಂಡರಿ ಸಿಡಿಸುತ್ತಿದ್ದಂತೆ ತಾವಿದ್ದ ಸ್ಥಳದಲ್ಲೇ ಕುಣಿದು ಕುಪ್ಪಳಿಸುತ್ತಿದ್ದಾರೆ. ನಿರೀಕ್ಷೆಯಂತೆ ಕಿಗ್ ಕೊಹ್ಲಿ, ಕೂಲ್ ಕ್ಯಾಪ್ಟನ್ ಮಹಿ ಪರ ಘೋಷಣೆಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಟ್ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್ ಲೋಗೋ