ಫ್ಲೋರಿಡಾ: ಬರೋಬ್ಬರಿ 158 ಕೆ.ಜಿ ತೂಕದ 10 ಅಡಿ ಉದ್ದದ ಮೊಸಳೆಯೊಂದು ಮಹಿಳೆಯೊಬ್ಬರ ಮನೆಯ ಬಾಗಿಲನ್ನು ತಟ್ಟಿ ಭಯಗೊಳಿಸಿರುವ ಘಟನೆ ಅಮೆರಿಕದ ಮೆರಿಟ್ ದ್ವೀಪದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಮೆರಿಟ್ ದ್ವೀಪದಲ್ಲಿ ಗೆರಿ ಸ್ಟೇಪಲ್ಸ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳ್ಳಂಬೆಳ್ಳಗ್ಗೆ ಯಾರೋ ಮನೆಯ ಬಾಗಿಲನ್ನು ಜೋರಾಗಿ ತಟ್ಟುತ್ತಿದ್ದ ಸದ್ದು ಕೇಳಿಬಂದಿದೆ. ಬಳಿಕ ಬಾಗಿಲನ್ನು ತೆಗೆಯುವ ಮುನ್ನ ಕಿಟಕಿಯಿಂದ ನೋಡಿದಾದ ಬೃಹತ್ ಗಾತ್ರದ ಮೊಸಳೆಯನ್ನು ಕಂಡು ಮಹಿಳೆ ಬೆಚ್ಚಿಬಿದ್ದಿದ್ದಾರೆ.
Advertisement
Advertisement
ಬಳಿಕ ಮೊಸಳೆಯನ್ನು ಕಂಡು ಭಯದಿಂದ ಕೂಗಿದಾಗ ಅಕ್ಕಪಕ್ಕದ ಮನೆಯವರು ಬಂದು ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಬರೋಬ್ಬರಿ 158 ಕೆ.ಜಿ ತೂಕವಿದ್ದ ಮೊಸಳೆಯನ್ನು ಅವರಿಂದ ಹಿಡಿಯಲು ಸಾಧ್ಯವಾಗಲಿಲ್ಲ.
Advertisement
ನಂತರ ವನ್ಯ ಜೀವಿ ರಕ್ಷಣಾ ತಂಡದವರಿಗೆ ಮೊಸಳೆಯ ಬಗ್ಗೆ ಮಾಹಿತಿ ತಿಳಿಸಿದಾಗ, ಸಿಬ್ಬಂದಿ ಸ್ಥಳಕ್ಕೆ ಬಂದು ಮೊಸಳೆಗೆ ಚುಚ್ಚು ಮದ್ದು ನೀಡಿ ಅದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
FRIGHTENING: A 10-foot-long alligator crawled up to a woman’s front door in Merrit Island and started knocking. We arrived after the 350lbs gator was shot by trappers. pic.twitter.com/jRmjV3SQhy
— NickyZizaza (@NickyZizaza) February 12, 2019
ಫ್ಲೋರಿಡಾ ರಾಜ್ಯದಲ್ಲಿ ಮೊಸಳೆಗಳು ಜನ ವಾಸಿಸುವ ಸ್ಥಳಗಳಲ್ಲಿ ಆಗಾಗ ಕಂಡು ಬರುತ್ತದೆ. ಆದರೇ ಕಳೆದ 20 ವರ್ಷಗಳಲ್ಲಿ ಇಷ್ಟು ದೊಡ್ಡ ಗಾತ್ರದ ಮೊಸಳೆ ಕಂಡುಬಂದಿರಲಿಲ್ಲ. ಈ ಹಿಂದೆ ಫ್ಲೋರಿಡಾದಲ್ಲಿ ಮನೆಯೊಂದರ ಈಜುಕೊಳದಲ್ಲಿ 9 ಅಡಿ ಉದ್ದದ ಮೊಸಳೆಯನ್ನು ಸೆರೆಹಿಡಿಯಲಾಗಿತ್ತು. ಅದರ ನಂತರ ಈ ಬಾರಿ ಸೆರೆಹಿಡಿದಿರುವ ಮೊಸಳೆ ಬೃಹತ್ ಗಾತ್ರದಾಗಿದೆ ಎಂದು ವನ್ಯ ಜೀವಿ ರಕ್ಷಣಾ ತಂಡದವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv