ಲಕ್ನೋ: ಹೋಳಿ (Holi) ಬಣ್ಣ ತಾಗಬಾರದೆಂದು ಎಂದು ಇಡೀ ಮಸೀದಿಯನ್ನು (Mosque) ಟಾರ್ಪಲ್‌ನಿಂದ ಮುಚ್ಚಿದ ಘಟನೆ ಉತ್ತರಪ್ರದೇಶದ (Uttar Pradesh) ಅಲಿಘರ್‌ನಲ್ಲಿ (Aligarh) ನಡೆದಿದೆ.
ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲಿಘರ್‌ನ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಮ್ ಮಸೀದಿಯಲ್ಲಿ ಟಾರ್ಪಲ್‌ನಿಂದ (Tarpaulin) ಮುಚ್ಚಲಾಗಿದೆ.
Advertisement
Advertisement
ಕಳೆದ ಕೆಲವು ವರ್ಷಗಳಿಂದ ಹೋಳಿ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದ ಮಸೀದಿಯನ್ನು ಹೋಳಿಯ ಹಿಂದಿನ ದಿನ ರಾತ್ರಿ ವೇಳೆ ಟಾರ್ಪಲ್‌ನಿಂದ ಮುಚ್ಚಲಾಗುತ್ತದೆ. ಆದ್ದರಿಂದ ಹೋಳಿಯಿಂದಾಗಿ ಮಸೀದಿಯ ಮೇಲೆ ಯಾರೂ ಬಣ್ಣ ಎರಚುವುದಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ
Advertisement
Advertisement
ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತದ ಸೂಚನೆಯ ಮೇರೆಗೆ ನಾವು ಮಸೀದಿಯನ್ನು ಟಾರ್ಪಲ್‌ನಿಂದ ಮುಚ್ಚಿದ್ದೇವೆ. ಆದ್ದರಿಂದ ಯಾರೂ ಮಸೀದಿಗೆ ಬಣ್ಣವನ್ನು ಎರೆಚಬಾರದು ಎಂದು ಹೇಳಿದರು. ಇದನ್ನೂ ಓದಿ: ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!