ಬಾಲಿವುಡ್ ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಪತ್ನಿ ಆಲಿಯಾ (Alia) ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.
Advertisement
ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ (Divorced) ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕ್ಲೆಸ್ ಫೋಟೋ ಶೇರ್, ಇಂಟರ್ನೆಟ್ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ
Advertisement
Advertisement
ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ (Dubai) ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.
Advertisement
ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.