ಟಾಲಿವುಡ್ (Tollywood) ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಪುತ್ರಿ ಸಿತಾರಾಗೆ (Sitara) ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಸೂಪರ್ ಸರ್ಪ್ರೈಸ್ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ. ಸಿತಾರಾಗೆ ಚೆಂದದ ಬಟ್ಟೆಯನ್ನ ಉಡುಗೊರೆಯಾಗಿ (Gift) ನೀಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ
ಸ್ಟಾರ್ ಕಿಡ್ ಸಿತಾರಾ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಮೂಲಕ ಒಂದಲ್ಲಾ ಒಂದು ಸಂದರ್ಶನ ಅಥವಾ ಟ್ರಾವೆಲಿಂಗ್ ಸ್ಟೋರಿಯನ್ನ ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿತಾರಾಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನೂ ಮಹೇಶ್ ಬಾಬು ಪುತ್ರಿ ತಂದೆಯಷ್ಟೇ ಗೌರವವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ಈ ಟ್ಯಾಲೆಂಟ್ ಬೇಬಿಯ ಪೋಸ್ಟ್‌ಗಳಿಗೆ ಪ್ರೀತಿಯಿಂದ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಾರೆ.
View this post on Instagram
ಈಗ ಸಿತಾರಾ, ಆಲಿಯಾ ಭಟ್ ಕಳುಹಿಸಿರುವ ಬಟ್ಟೆ ಬಾಡಿಕಾನ್ ಡ್ರೇಸ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿತಾರಾ ಅಂದಕ್ಕೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಂದೆಯಂತೆ ಬಣ್ಣ, ಅಮ್ಮನಂತೆ ಕ್ಯೂಟ್ ಅಂತ ಕಾಮೆಂಟ್ ಮೂಲಕ ಹೊಗಳುತ್ತಿದ್ದಾರೆ.
ಮಹೇಶ್ ಬಾಬು ಪುತ್ರಿ ಸಿತಾರಾ, ಆಲಿಯಾ ಕಳುಹಿಸಿದ ಡ್ರೆಸ್ ಧರಿಸಿರುವ ಫೋಟೋ ಶೇರ್ ಮಾಡಿ, ನಟಿಗೆ ಧನ್ಯವಾದ ತಿಳಿಸಿದ್ದಾರೆ. ನಟನೆಯ ಜೊತೆ ಮಕ್ಕಳ ಬಟ್ಟೆ ಕಲೆಕ್ಷನ್ ಉದ್ಯಮ ಹೊಂದಿರುವ ಆಲಿಯಾರ ಡ್ರೆಸ್ ಕಲೆಕ್ಷನ್‌ಗೆ ಸಿತಾರಾ ಮೆಚ್ಚುಗೆ ಸೂಚಿಸಿದ್ದಾರೆ.