ಬಾಲಿವುಡ್‌ನ ನಿರೀಕ್ಷಿತ ರಣ್‌ಬೀರ್ ಕಪೂರ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿನ ಮೌನಿ ರಾಯ್ ಲುಕ್ ನೋಡಿ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಮೌನಿ ಲುಕ್‌ನ ಟ್ರೋಲ್ ಮಾಡುತ್ತಿದ್ದಾರೆ.
ಬಾಲಿವುಡ್ ನಟ ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು, ಮೌನಿ ರಾಯ್ ಲುಕ್ ಸಖತ್ ಟ್ರೋಲ್ ಆಗಿದೆ. ಕೆಲ ದಿನಗಳ ಹಿಂದೆ ಮೌನಿ ಅವರ ಪ್ಲಾಸ್ಟಿಕ್ ಸರ್ಜರಿ ಲುಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈಗ ಆ ವಿಚಾರವನ್ನೂ ಸೇರಿಸಿ ಮೌನಿ ರಾಯ್ ಅವರಿಗೆ ನಕಾರಾತ್ಮಕ ಕಾಮೆಂಟ್ ಹಾಕಲಾಗುತ್ತಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್
View this post on Instagram
ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು, ಮೌನಿ ರಾಯ್ ಲುಕ್ ಸಖತ್ ಟ್ರೋಲ್ ಆಗುತ್ತಿದೆ. ಮೌನಿ ಕೂಡ ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮೌನಿ ಅವರ ಪ್ಲಾಸ್ಟಿಕ್ ಸರ್ಜರಿ ಲುಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈಗ ಆ ವಿಚಾರವನ್ನೂ ಸೇರಿಸಿ ಮೌನಿ ರಾಯ್ ಅವರಿಗೆ ನಕಾರಾತ್ಮಕ ಕಾಮೆಂಟ್ ಹಾಕಲಾಗುತ್ತಿದೆ.
`ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮೌನಿ ರಾಯ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರು ಈ ಸಿನಿಮಾದ ಪಾತ್ರದಲ್ಲಿ ಕಾಮಿಕ್ ಬುಕ್‌ನಲ್ಲಿ ಬರುವ ಸಸ್ತಿ ನೋಡಿದ ಹಾಗೆ ಕಾಣುತ್ತಿದ್ದಾರೆ ಜತೆಗೆ ಪಾಕಿಸ್ತಾನದ ಕಾರ್ಟೂನ್‌ನಂತೆ ಇದ್ದೀರಾ ಎಂಬ ನೆಗೆಟಿವ್ ಕಾಮೆಂಟ್‌ಗಳು ಮೌನಿಗೆ ಹರಿದು ಬರುತ್ತಿದೆ.
ʻಬ್ರಹ್ಮಾಸ್ತ್ರʼ ಸಿನಿಮಾ ಮೂರು ಭಾಗಗಳಾಗಿ ತೆರೆಗೆ ಬರಲಿದೆ. ಮೊದಲ ಭಾಗದ ಕಥೆ ಶಿವನ ಸುತ್ತ ಸುತ್ತಲಿದೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶಿವ ತ್ರಿಪಾಠಿ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್, ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 15ಕ್ಕೆ ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ.