ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

Public TV
1 Min Read
FotoJet 1 39

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ವಿಚಾರ ಪದೇ ಪದೇ ಟ್ವಿಸ್ಟು, ಟರ್ನು ತಗೆದುಕೊಳ್ಳುತ್ತಿದೆ. ಇವರು ಮದುವೆ ಆಗುತ್ತಾರೋ, ಇಲ್ಲವೋ ಎಂದು ಕೋಪ ಬರುವಷ್ಟು ದಿನಾಂಕಗಳು ಬದಲಾಗಿವೆ. ಆದರೂ, ಇವತ್ತಿನವರೆಗೂ ಅವರು ಇಂತಹ ಡೇಟ್ ನಲ್ಲೇ ಮದುವೆ ಆಗುತ್ತೇವೆ ಎಂದು ಹೇಳದೇ ಇದ್ದರೂ, ಬಿಟೌನ್ ಅಂಗಳದಲ್ಲಿ ಮಾತ್ರ ಡೇಟ್ ಗಳು ಗಿರಿಕಿ ಹೊಡೆಯುತ್ತಲೇ ಇರುತ್ತದೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

FotoJet 3 31

ಈವರೆಗೂ ಆಲಿಯಾ ಮತ್ತು ರಣಬೀರ್ ಡಿಸೆಂಬರ್ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆಂದು ಹೇಳಲಾಗಿತ್ತು. ಇದೀಗ ಬಂದಿರುವ ನಯಾ ಡೇಟ್ ಅಂದರೆ ಅಕ್ಟೋಬರ್ ನಲ್ಲಿ ಮದುವೆ ಆಗುತ್ತಾರಂತೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

FotoJet 2 38

ರಣಬೀರ್ ಮತ್ತು ಆಲಿಯಾ ಎಲ್ಲ ಸಿದ್ಧತೆ ಮಾಡಿಕೊಂಡೇ ಸಪ್ತಪದಿ ತುಳಿಯಲಿದ್ದಾರೆ. ಹಾಗಾಗಿ ತಾವು ಇರಬೇಕಾದ ಮನೆಯ ಕೆಲಸ ಶುರು ಮಾಡಿಸಿದ್ದಾರೆ. ಮದುವೆ ನಂತರ ಅವರು ಮುಂಬಯಿನ ಪಾಲಿಹಿನ್ ನಲ್ಲಿರುವ ಕೃಷ್ಣ ರಾಜ್ ನಲ್ಲಿ ಉಳಿದುಕೊಳ್ಳಲಿದ್ದಾರೆ. ಆ ಮನೆಯ ನವೀಕರಣ ನಡೆಯುತ್ತಿದೆಯಂತೆ. ಜತೆಗೆ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿಯೇ ಹೊಸಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ.  ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

FotoJet 53

ಹೀಗೆ ಪದೇ ಪದೇ ಮದುವೆ ದಿನಾಂಕಗಳು ಬದಲಾಗುತ್ತಿರುವ ಬೆನ್ನಲ್ಲೆ, ನೀವು ಯಾವತ್ತು ಮದುವೆ ಆಗ್ತೀರಾ ಹೇಳಿ ಎಂದು ಸ್ವತಃ ಅಭಿಮಾನಿಗಳೇ ಕೇಳುವಂತಾಗಿದೆ. ಸದ್ಯ ಅಕ್ಟೋಬರ್ ಎರಡನೇ ವಾರದಲ್ಲಿ ಈ ಜೋಡಿ ಮದುವೆ ಆಗಲಿದೆ ಎಂದು ಹೇಳಲಾಗುತ್ತದೆ. ಅಷ್ಟರಲ್ಲಿ ಇನ್ನೆಷ್ಟು ದಿನಾಂಕಗಳು ಬದಲಾಗಲಿವೆಯೋ ಯಾರಿಗೆ ಗೊತ್ತು?

Share This Article
Leave a Comment

Leave a Reply

Your email address will not be published. Required fields are marked *