ಮುಂಬೈ: ಬಾಲಿವುಡ್ ಪ್ರಣಯ ಪಕ್ಷಿಗಳು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಸ್ಥಳ ಹುಡುಕಲು ಜೈಪುರಕ್ಕೆ ಬಂದಿದ್ದಾರೆ.
ಆಲಿಯಾ ಮತ್ತು ರಣಬೀರ್ ಈ ವಾರಾಂತ್ಯದಲ್ಲಿ ಜೈಪುರದ ಏರ್ರ್ಪೋಟ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಫ್ಯಾನ್ ಕ್ಲಬ್ ನಲ್ಲಿ ಈ ಪ್ರಣಯ ಪಕ್ಷಿಗಳ ಫೊಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇವರಿಬ್ಬರು ಜೈಪುರದ ಜವಾಯ್ ಬಂದ್ ಗೆ ತಮ್ಮ ಮದುವೆಯ ಸ್ಥಳವನ್ನು ಹುಡುಕಿಕೊಂಡು ಬಂದಿದ್ದರು ಎಂದು ಅಭಿಮಾನಿಗಳು ಬರೆದು ಪೋಸ್ಟ್ ಮಾಡಿದ್ದಾರೆ. ಆದರೆ ಈ ಕುರಿತು ಪ್ರಣಯ ಪಕ್ಷಿಗಳು ಮಾತ್ರ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ
View this post on Instagram
ಆಲಿಯಾ ಮತ್ತು ರಣಬೀರ್ ಕ್ಯಾಶುಯಲ್ ಆಗಿ ಡ್ರೆಸ್ ಮಾಡಿಕೊಂಡಿದ್ದರು. ಆಲಿಯಾ ಕ್ಲಾಸಿಕ್ ಡೆನಿಮ್ ಮತ್ತು ವೈಟ್ ಟೀ ಶರ್ಟ್ ಹಾಕಿಕೊಂಡಿದ್ದು, ರಣಬೀರ್ ಲೌಂಜ್ ಸೆಟ್ ಧರಿಸಿದ್ದರು.
2018ರಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ 2019ರ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಆಲಿಯಾ ವೇದಿಕೆಯಲ್ಲಿ ರಣಬೀರ್ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವುದರ ಮೂಲಕ ಅವರಿಬ್ಬರ ಪ್ರೀತಿಯ ವಿಷಯವನ್ನು ದೃಢಪಡಿಸಿದ್ದರು. ಅದು ಅಲ್ಲದೇ ರಣಬೀರ್ ಅವರ ತಾಯಿ ನೀತು ಕಪೂರ್ ಸಹ ಈ ಕುರಿತು ದೃಢಪಡಿಸಿದ್ದರು. ಅಂದಿನಿಂದ ಈ ಜೋಡಿಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’
View this post on Instagram
ಆಲಿಯಾ ಮತ್ತು ರಣಬೀರ್ ನಟನೆಯ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಯ ನಂತರ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದರೆ ಎಂದು ಕೆಲವು ಮೂಲಗಳ ಪ್ರಕಾರ ತಿಳಿದುಬರುತ್ತಿದೆ.