ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತಾವು ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ ದಿನದಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನು ಆಲಿಯಾ ಗರ್ಭಿಣಿಯಾಗಿದ್ದಾರೆ ಅವರ ನಟಿಸುವ ಚಿತ್ರಗಳು ಪೂರ್ಣಗೊಳಿಸುವುದು ಕಷ್ಟ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ವಿದೇಶಕ್ಕೆ ಹಾರಿ ಹಾಲಿವುಡ್ ಸಿನಿಮಾವನ್ನ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ. ಈಗ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಆಲಿಯಾ ಬೇಬಿ ಬಂಪ್ ಫೋಟೋ ಸಖತ್ ವೈರಲ್ ಆಗುತ್ತಿದೆ.
ಆಲಿಯಾ ಭಟ್ ಹಾಗೂ ಹಾಲಿವುಡ್ ನಟಿ ಗಾಲ್ ಗ್ಯಾಡೋಟ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ `ಹಾರ್ಟ್ ಆಫ್ ಸ್ಟೋನ್’. ಹಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಲಿಯಾ ಕನಸನ್ನು ನನಸು ಮಾಡಿದ ಸಿನಿಮಾವಿದು. ಇದೇ ಕನಸಿನ ಪ್ರಾಜೆಕ್ಟ್ ಅನ್ನೇ ಆಲಿಯಾ ಮುಗಿಸಿ ಬಂದಿದ್ದಾರಷ್ಟೇ. ಅಷ್ಟರಲ್ಲಿಯೇ ಆಲಿಯಾ ಭಟ್ ಬೇಬಿ ಬಂಪ್ ಇಟ್ಟುಕೊಂಡೇ ನಟಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿವೆ. ಇದನ್ನೂ ಓದಿ:ಕರಣ್ ಜೊತೆ ಫಸ್ಟ್ ನೈಟ್ ಗುಟ್ಟು ಬಿಚ್ಚಿಟ್ಟ ದೀಪಿಕಾ ಪಡುಕೋಣೆ ಪತಿ ರಣವೀರ್
View this post on Instagram
ಆಲಿಯಾ ಭಟ್ ಮತ್ತು ರಣ್ವೀರ್ ಕಪೂರ್ ಇದೇ ಏಪ್ರಿಲ್ 14ಕ್ಕೆ ಹಸೆಮಣೆ ಏರಿದ್ದರು. ಮದುವೆಯಾದ ಎರಡೂವರೆ ತಿಂಗಳಿಗೆ ತಾವು ಅಮ್ಮನಾಗಿರುವ ವಿಚಾರವನ್ನ ಆಲಿಯಾ ಭಟ್ ರಿವೀಲ್ ಮಾಡಿದ್ದರು. ಬಳಿಕ ಆಲಿಯಾ ಕುರಿತು ಸಾಕಷ್ಟು ಸುದ್ದಿ, ಸದ್ದು ಮಾಡಿದ್ದವು. ಈ ಬೆನ್ನಲ್ಲೇ ಆಲಿಯಾ ಈ ಹಿಂದೆ ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್ಗಳನ್ನ ಕಂಪ್ಲಿಟ್ ಮಾಡಿ ಕೊಟ್ಟಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಸ್ ಸೌಂಡ್ ಮಾಡ್ತಿದ್ದಾರೆ.