ಲಂಡನ್: ವಿಶ್ವದ ನಂ.3 ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಟೂರ್ನ್‍ಮೆಂಟ್ ಸೋತಿದ್ದಕ್ಕೆ ಅಂಪೈರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮೆಕ್ಸಿಕನ್ ಓಪನ್ ಟೂರ್ನಮೆಂಟ್‌ನಲ್ಲಿ ನಡೆದಿದೆ.
ಡಬಲ್ಸ್ ಪಂದ್ಯದಲ್ಲಿ 24 ವರ್ಷದ ಜರ್ಮನ್‍ನ ಜ್ವೆರೆವ್ ಹಾಗೂ ಬ್ರೆಜಿಲ್‍ನ ಮಾರ್ಸೆಲೋ ಮೆಲೊ ಜೋಡಿ ಬ್ರಿಟನ್ ಲಾಯ್ಡ್ ಗ್ಲಾಸ್‍ಪೂಲ್ ಫಿನ್ ಲ್ಯಾಂಡ್‍ನ ಹ್ಯಾರಿ ಜೋಡಿ ವಿರುದ್ಧ 6-10 ಅಂತರದಲ್ಲಿ ಸೋಲನುಭವಿಸಿತು.
Advertisement
Advertisement
ಇದರಿಂದ ತಾಳ್ಮೆ ಕಳೆದುಕೊಂಡ ಜ್ವೆರೆವ್ ಅಂಪೈರ್ ಕುಳಿತಿದ್ದ ಕುರ್ಚಿಗೆ ರಾಕೆಟ್‍ನಿಂದ ಬಡಿದಿದ್ದಾರೆ. ಅಂಪೈರ್ ಸಮೀಪಕ್ಕೆ ಹೋಗಿ ಹೊಡೆಯಲು ಹೋಗಿದ್ದಾರೆ. ಅಲ್ಲದೇ ಅಂಪೈರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ
Advertisement
ವಿಶ್ವದ ನಂ.3 ಆಟಗಾರನ ಈ ಅನುಚಿತ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಸಿಂಗಲ್ಸ್ ಟೂರ್ನಿಯಿಂದ ವಜಾಗೊಳಿಸಿ ಅವರನ್ನು ಟೂರ್ನಿಯಿಂದಲೇ ಹೊರಹಾಕಿದ್ದಾರೆ. ಜ್ವೆರೆವ್‍ಗೆ ಟೆನಿಸ್ ವೃತ್ತಿಪರ ನಿಷೇಧ ಹಾಗೂ ಭಾರೀ ಮೊತ್ತದ ದಂಡ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ