ಯಾದಗಿರಿ: ಭಾರತ (India) ಮತ್ತು ಪಾಕಿಸ್ತಾದ (Pakistan) ಯುದ್ಧ ಭೀತಿ ಹಾಗೂ ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ನಾರಾಯಣಪುರದ (Narayanapura) ಬಸವಸಾಗರ ಡ್ಯಾಂನಲ್ಲಿ (Basava Sagar Reservoir) 42 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. ಸರ್ಕಾರ ರಾಜ್ಯದ 17 ಡ್ಯಾಂಗಳಿಗೆ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದು, ನಾರಾಯಣಪುರ ಡ್ಯಾಂನಲ್ಲಿ ಭದ್ರತೆ ವಹಿಸಲಾಗಿದೆ. ಡ್ಯಾಂನ 4 ಗೇಟ್‌ಗಳಲ್ಲಿ ಪೊಲೀಸರು ನಿಗಾವಹಿಸಿದ್ದು, ಯಾದಗಿರಿ, ರಾಯಚೂರು, ವಿಜಯಪುರ ಸೇರಿ 42 ಪೊಲೀಸರನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ರಾಜ್ಯದ ಎಲ್ಲಾ 17 ಅಣೆಕಟ್ಟೆಗಳಿಗೆ ಭದ್ರತೆ ಒದಗಿಸಲು ಸರ್ಕಾರ ಆದೇಶ
ಸದ್ಯ ಡ್ಯಾಂಗಳ ಸುರಕ್ಷತೆ ದೃಷ್ಟಿಯಿಂದ ಭದ್ರತೆ ಹೆಚ್ಚಿಸಲಾಗಿದ್ದು, ಡ್ಯಾಂ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಡ್ಯಾಂ ಒಳಗೆ ಯಾರಿಗೂ ಪ್ರವೇಶವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಹೆಚ್ಚಿನ ಭದ್ರತೆ ಒದಗಿಸಲು ಸರ್ಕಾರ ಆದೇಶಿಸಿದೆ. ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟೆಗಳಿಗೆ ಭದ್ರತೆ ನೀಡಲು ಸೂಚನೆ ನೀಡಿದೆ.
ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಯಾವ್ಯಾವ ಅಣೆಕಟ್ಟೆಗಳು?
ಕಾವೇರಿ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕರ್ನಾಟಕ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕೃಷ್ಣ ಭಾಗ್ಯ ಜಲನಿಗಮ ನಿಯಮಿತ- ಬೆಂಗಳೂರು, ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ- ಬೆಂಗಳೂರು, ಮುಖ್ಯ ಎಂಜಿನಿಯರ್ ನೀರಾವರಿ ದಕ್ಷಿಣ- ಮೈಸೂರು, ಹೇಮಾವತಿ ನಾಲಾವಲಯ- ತುಮಕೂರು, ಹೇಮಾವತಿ ಯೋಜನೆ- ಗೊರೂರು, ನೀರಾವರಿ ಉತ್ತರ- ಬೆಳಗಾವಿ, ತುಂಗಾ ಮೇಲ್ದಂಡೆ- ಶಿವಮೊಗ್ಗ, ಮಲಪ್ರಭಾ ಯೋಜನಾ ವಲಯ- ಧಾರವಾಡ, ಮುನಿರಾಬಾದ್ ನೀರಾವರಿ ಕೇಂದ್ರ ವಲಯ, ನೀರಾವರಿ ಯೋಜನಾ ವಲಯ- ಕಲಬುರಗಿ, ಭದ್ರಾ ಮೇಲ್ದಂಡೆ ಯೋಜನೆ- ಚಿತ್ರದುರ್ಗ, ಆಲಮಟ್ಟಿ ಅಣೆಕಟ್ಟು ವಲಯ, ಕಾಲುವೆ 1 ಭೀಮರಾಯನಗುಡಿ, ಕಾಲುವೆ 2- ರಾಂಪುರ, ನಾರಾಯಣಪುರ ಅಣೆಕಟ್ಟು.ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?