ಅಮೆರಿಕಾದ ಸ್ಟಾರ್ ನಟ(American Actor) ಅಲೆಕ್ ಬಾಲ್ಟಿನ್ (Alec Baldwin) ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ತಮ್ಮ 64ನೇ ವಯಸ್ಸಿಗೆ 7ನೇ ಮಗುವಿಗೆ ತಂದೆಯಾಗಿದ್ದಾರೆ. ಅಲೆಕ್ ದಂಪತಿ ಮಗಳು ಬಂದಿರುವ ಖುಷಿಯಲ್ಲಿದ್ದಾರೆ.
ಹಾಲಿವುಡ್ನ ಸ್ಟಾರ್ ಜೋಡಿ ತಮ್ಮ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ನಟಿ ಹಿಲರಿಯಾ(Hilaria) ಕೂಡ ಮಗಳ ಜೊತೆಗಿನ ವೀಡಿಯೋ ಹಂಚಿಕೊಂಡು ಎಕ್ಸೈಟ್ ಆಗಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ
View this post on Instagram
ಈಗಾಗಲೇ ಈ ದಂಪತಿಗಳಿಗೆ 6 ಜನ ಮಕ್ಕಳಿದ್ದಾರೆ. ಬಳಿಕ ಇದೀಗ 7ನೇ ಮಗುವಿನ ಎಂಟ್ರಿಯಿಂದ ಸಂತಸ ಮನೆಮಾಡಿದೆ. ತಮ್ಮ 64ನೇ ವಯಸ್ಸಿನಲ್ಲಿ ಅಪ್ಪನಾಗಿರುವ ಅಲೆಕ್ ಬಾಲ್ಟಿನ್ ಕುಟುಂಬದ ಫೋಟೋಗಳು ಕೂಡ ನೆಟ್ಟಿಗರ ಗಮನ ಸೆಳೆಯುತ್ತಿದೆ.