ಲಕ್ನೋ: ಕುಡುಕನೊಬ್ಬ ಮದ್ಯ (alcohol) ಸೇವಿಸಿದ ಅಮಲಿನಲ್ಲಿ 2 ನಾಯಿಮರಿಗಳ (Puppy) ಬಾಲ (Tail) ಮತ್ತು ಕಿವಿಗೆ (Ear) ಉಪ್ಪು ಸವರಿ ಸ್ನ್ಯಾಕ್ಸ್ ತಿಂದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಬರೇಲಿ ಜಿಲ್ಲೆಯ ಫರೀದ್‍ಪುರ ಪ್ರದೇಶದ ಎಸ್‍ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ ಮುಖೇಶ್ ವಾಲ್ಮೀಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಅಮಾನವೀಯ ಕೃತ್ಯ ಎಸಗಿದ್ದಾನೆ.
ಕುಡುಕ ಮುಖೇಶ್ 2 ನಾಯಿ ಮರಿಗಳ ಒಂದು ಕಿವಿ ಹಾಗೂ ಬಾಲವನ್ನು ಕತ್ತರಿಸಿ ಮದ್ಯದೊಂದಿಗೆ ಸೇವಿಸಿದ್ದಾನೆ. ಇದರಿಂದಾಗಿ 2 ನಾಯಿ ಮರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವೆರೆಡು ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿವೆ. ಇದನ್ನೂ ಓದಿ: ಮದ್ಯಕ್ಕೆ ಸಾಲ ಕೊಡಲ್ಲ ಎಂದಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿದ ನೆರೆಮನೆಯಾತ
ಘಟನೆಗೆ ಸಂಬಂಧಿಸಿ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯ ಧೀರಜ್ ಪಾಠಕ್ ಎಂಬಾತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ