ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ವೇಳೆಯೇ ಭಾರತದ ಮೇಲೆ ದಾಳಿ ಮಾಡುವಂತೆ ಪಾಕ್ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ (Asim Munir) ಅಲ್-ಖೈದಾ ಭಯೋತ್ಪಾದಕಿ ಬೆಂಗಳೂರಿನಿಂದಲೇ (Bengaluru) ಮನವಿ ಮಾಡಿರುವ ಎಟಿಎಸ್ (Anti-Terrorism Squad) ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಅಲ್-ಖೈದಾ ಭಯೋತ್ಪಾದಕಿ ಶಮಾ ಪರ್ವೀನ್ ಅನ್ಸಾರಿ (Shama Parveen Ansari) 2 ಫೇಸ್‌ಬುಕ್ ಹಾಗೂ 1 ಇನ್ಸಾ÷್ಟಗ್ರಾಂ ಖಾತೆಯನ್ನು ಹೊಂದಿದ್ದಳು. ಭಾರತದ ಮೇಲೆ ದಾಳಿ ಮಾಡುವಂತೆ ಅಲ್ಲದೇ ಇಲ್ಲಿನ ಮುಸ್ಲಿಂ ಪ್ರದೇಶಗಳನ್ನು ಏಕೀಕರಣಗೊಳಿಸುವಂತೆ ಸೋಶಿಯಲ್ ಮೀಡಿಯಾದ ಮೂಲಕವೇ ಆಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ವಿಚಾರವು ಗುಜರಾತ್ ಎಟಿಎಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಪ್ಪಂದದಿಂದ ಹಿಂದೆ ಸರಿದ ರಾಜ್ಯ ಸರ್ಕಾರ – ಶಿವಮೊಗ್ಗ To ಹರಿಹರ ರೈಲ್ವೆ ಯೋಜನೆ ಕೈಬಿಟ್ಟ ಕೇಂದ್ರ
ಸೋಶಿಯಲ್ ಮೀಡಿಯಾದಲ್ಲಿ ಆಸೀಮ್ ಮುನೀರ್ ಫೋಟೋ ಹಾಕಿ ಭಾರತದ ಮುಸ್ಲಿಂ ಪ್ರದೇಶಗಳನ್ನು ಏಕೀಕರಣಗೊಳಿಸಲು ಇದು ಉತ್ತಮ ಅವಕಾಶ. ಭಾರತದ ಮೇಲೆ ದಾಳಿ ನಡೆಸಿ, ಹಿಂದುತ್ವ ಹಾಗೂ ಯಹೂದಿ ನಿರ್ಮೂಲನೆ ಮಾಡಲು ಖಿಲಾಫತ್ ಸ್ವೀಕರಿಸುವಂತೆ ಬರೆದುಕೊಂಡಿದ್ದಳು. ಇದನ್ನೂ ಓದಿ: ಟ್ರಂಪ್ ಬೆದರಿಕೆಗೆ ಜಗ್ಗದ ಭಾರತ – ರಷ್ಯಾದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ
10 ಸಾವಿರ ಫಾಲೋವರ್ಸ್ ಹೊಂದಿರುವ ಶಮಾ, ಸೋಶಿಯಲ್ ಮೀಡಿಯಾದ ಮೂಲಕವೇ ಅಲ್‌ಖೈದಾ ಸಿದ್ಧಾಂತ ಹರಡುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಬುರುಡೆ ರಹಸ್ಯ| 13ನೇ ಜಾಗದ ಶೋಧಕ್ಕೆ GPR ಬಳಕೆ ಸಾಧ್ಯತೆ
ಅಲ್-ಖೈದಾದೊಂದಿಗೆ ನಂಟು ಹೊಂದಿದ್ದ ಹಿನ್ನೆಲೆ ಶಮಾ ಪರ್ವೀನ್ ಅನ್ಸಾರಿಯನ್ನು ಜು. 29ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಜಾರ್ಖಂಡ್ ಮೂಲದ ಶಮಾ ಬೆಂಗಳೂರಿನ ಹೆಬ್ಬಾಳದ ಬಳಿ ನೆಲೆಸಿದ್ದಳು.