`ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ನಂತರ `ರಕ್ಷಾ ಬಂಧನ’ ಸಿನಿಮಾ ಪ್ರಚಾರದತ್ತ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಹೊಸ ಪ್ರಾಜೆಕ್ಟ್ ವಿಚಾರವಾಗಿ ಖಿಲಾಡಿ ಅಕ್ಷಯ್ ಕುಮಾರ್ ಸುದ್ದಿಯಾಗುತ್ತಿದ್ದಾರೆ. ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ `ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದ ನಂತರ ಸದ್ಯ ಗಿಣಿ ಇಂಜಿನಿಯರ್ ಕಥೆ ಹೇಳಲು ಅಕ್ಷಯ್ ರೆಡಿಯಾಗಿದ್ದಾರೆ. ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ನಟಿಸಲಿದ್ದಾರೆ. ಇದನ್ನೂ ಓದಿ:ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ
View this post on Instagram
1989ರಲ್ಲಿ ಕಲ್ಲಿದ್ದಲು ಗಣಿ ಪ್ರವಾಹಕ್ಕೆ ಸಿಲುಕಿದಾಗ 60ಕ್ಕೂ ಹೆಚ್ಚು ಜೀವಗಳನ್ನು ಉಳಿಸಲು ರಕ್ಷಣಾ ಕಾರ್ಯಚರಣೆಯನ್ನು ಗಿಲ್ ಅವರ ಜೀವನವನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕ ಟೀನು ಸುರೇಶ್ ದೇಸಾಯಿ ಹೊರಟಿದ್ದಾರೆ. ಜಸ್ವಂತ್ ಗಿಲ್ ಪಾತ್ರಕ್ಕೆ ಅಕ್ಷಯ್ ಜೀವ ತುಂಬಲಿದ್ದಾರೆ. ನಾಯಕಿ ಪರಿಣಿತಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಅಕ್ಷಯ್ ಮತ್ತು ಚಿತ್ರತಂಡ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv