ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿ ಹೊಗಳಿಕೆ ಮತ್ತು ಟೀಕೆಗೂ ಗುರಿಯಾದವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್. ಪ್ರಧಾನಿ ಜೊತೆಗಿನ ಒಂದೊಂದು ಮಾತು ಕೂಡ ಭಾರೀ ಚರ್ಚೆಗೂ ಕಾರಣವಾಗಿದ್ದವು. ಈಗ ಆ ಐತಿಹಾಸಿಕ ಸಂದರ್ಶನವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ಪ್ರಧಾನಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.
Advertisement
ನರೇಂದ್ರ ಮೋದಿ ಅವರನ್ನು ನಾನು ಸಂದರ್ಶಿಸಿದ್ದೇನೆ ಎನ್ನುವುದೇ ನನಗಿರುವ ಹೆಮ್ಮೆ. ಕೇಳಲಾದ ಪ್ರಶ್ನೆಗಳು ಹೇಗಿದ್ದವು ಎನ್ನುವುದಕ್ಕಿಂತ, ಅವರ ಎದುರು ನಾನು ಕುಳಿತಿದ್ದೇನೆ ಎನ್ನುವುದೇ ನನಗೆ ದೊಡ್ಡ ಹೆಮ್ಮೆ ಅನಿಸಿತ್ತು. ಅವರ ಸರಳತೆ, ವ್ಯಕ್ತಿತ್ವನ್ನು ರೂಪಿಸಿಕೊಂಡ ಬಗೆಯು ನನಗೆ ತುಂಬಾ ಹಿಡಿಸಿತು ಎಂದು ಹೇಳಿದ್ದಾರೆ ಅಕ್ಷಯ್ ಕುಮಾರ್. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ
Advertisement
Advertisement
ಪ್ರಧಾನಿ ಮೋದಿ ಅವರ ಗುಣಗಳ ಬಗ್ಗೆಯೂ ಮಾತನಾಡಿರುವ ಅವರು, ಮೋದಿ ಅವರಲ್ಲಿ ನಾನು ಕಂಡ ಉತ್ತಮ ಗುಣವೆಂದರೆ, ಯಾರು ಹೇಗಿರುತ್ತಾರೋ ಹಾಗೆಯೇ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿಯೇ ಅವರು ವರ್ತಿಸುತ್ತಾರೆ. ವಯಸ್ಸಿನ ಮತ್ತು ಅಧಿಕಾರದ ಅನುಗುಣವಾಗಿಯೇ ಅವರು ನಡೆದುಕೊಳ್ಳುತ್ತಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
Advertisement
ಸದ್ಯ ಅಕ್ಷಯ್ ಕುಮಾರ್ ಅವರ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆಸಲಾದ ಸಂದರ್ಶನದಲ್ಲಿ ಮೋಡಿ ಅವರನ್ನು ಹೊಗಳುವುದರ ಜೊತೆಗೆ ಇತಿಹಾಸದ ಕೆಲವು ಎಚ್ಚರಿಕೆಗಳನ್ನೂ ಅವರು ನೀಡಿದ್ದಾರೆ. ನಾವು ಮೊಘಲರ ಬಗ್ಗೆ ತಿಳಿಯುವುದು ತಪ್ಪಲ್ಲ, ಆದರೆ, ನಮ್ಮ ಶ್ರೇಷ್ಠ ರಾಜರ ಬಗ್ಗೆಯೂ ತಿಳಿಯಬೇಕಲ್ಲ ಎಂದು ಪೃಥ್ವಿರಾಜ್ ಕಥೆಯ ಬಗ್ಗೆ ಮಾತನಾಡಿದ್ದಾರೆ.