ನವದೆಹಲಿ: ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಅವರು ಫೋನಿ ಚಂಡಮಾರುತದಿಂದ ತತ್ತರಿಸಿದ ಒಡಿಶಾ ರಾಜ್ಯಕ್ಕೆ 1 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಿಧಿಗೆ ಈ 1 ಕೋಟಿಯನ್ನು ನೀಡಿದ್ದಾರೆ. ಈ ಮೂಲಕ ಫೋನಿ ಚಂಡಮಾರುತಕ್ಕೆ ಬಲಿಯಾದ ಒಡಿಶಾ ರಾಜ್ಯಕ್ಕೆ ಹಣ ಸಹಾಯ ಮಾಡಿದ ಮೊದಲ ನಟ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ಇದನ್ನು ಓದಿ: ಹುತಾತ್ಮ ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ 5 ಕೋಟಿ ರೂ. ದಾನ
ಅಕ್ಷಯ್ ಕುಮಾರ್ ಅವರು ಮುಂಚಿನಿಂದಲೂ ದೇಶದ ಸಮಸ್ಯೆಗಳಿಗೆ ಬೇಗ ಸ್ಪಂದಿಸುತ್ತಾರೆ. ಹಿಂದೆ ಕೇರಳದಲ್ಲಾದ ಪ್ರವಾಹ ಮತ್ತು ಚೆನ್ನೈ ಪ್ರವಾಹಗಳಿಗೂ ಧನ ಸಹಾಯ ಮಾಡಿದ್ದರು. ಭಾರತೀಯ ಸೇನೆಯ ಬಗ್ಗೆ ವಿಶೇಷ ಅಸಕ್ತಿಯನ್ನು ಹೊಂದಿರುವ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೂ ಧನ ಸಹಾಯ ಮಾಡಿದ್ದರು. ಇದನ್ನು ಓದಿ: ಅಕ್ಷಯ್ ಕುಮಾರ್ ಆರ್ಮಿಗೆ ಸೇರ್ತಾರಂತೆ!
ಅಕ್ಷಯ್ ಕುಮಾರ್ ಅವರು ಸದ್ಯ ರಾಜ್ ಮೆಹ್ತಾ ನಿರ್ದೇಶನದ ಗೂಡ್ ನ್ಯೂಸ್ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, 9 ವರ್ಷಗಳ ನಂತರ ಬಾಲಿವುಡ್ ಬೆಬೊ ಕರೀನಾ ಕಪೂರ್ ಅವರ ಜೊತೆ ನಟಿಸಲಿದ್ದಾರೆ.