Monday, 10th December 2018

Recent News

ಅಕ್ಷಯ್ ಕುಮಾರ್ ಆರ್ಮಿಗೆ ಸೇರ್ತಾರಂತೆ!

ಮುಂಬೈ: ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಆರ್ಮಿಗೆ ಸೇರುವ ಇಚ್ಛೆಯನ್ನು ಹೊರಹಾಕಿದ್ದಾರೆ.

ಬಹುದಿನಗಳ ಬಳಿಕ ನಿಮ್ಮೊಂದಿಗೆ ಮಾತನಾಡಲು ಬರುತ್ತಿರುವೆ. ಯಾರಾದರು ಪ್ರಶ್ನೆ ಕೇಳುವುದಿದ್ದರೆ ಕೇಳಿ ಎಂದು ಹೇಳಿ ಅಕ್ಷಯ್ ಕುಮಾರ್ ಸೆಲ್ಫಿ ವಿಡಿಯೋ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಬರೆದು ಟ್ವೀಟ್ ಮಾಡಿದರೆ, ಅಕ್ಷಯ್ ಕುಮಾರ್ ಅದಕ್ಕೆ ಉತ್ತರಿಸುತ್ತಾ ಸಾಗಿದರು.

ಈ ವೇಳೆ ಅಭಿಮಾನಿಯೊಬ್ಬರು ‘ಸರ್ ನೀವು ಮುಂದಿನ ಜನ್ಮದಲ್ಲಿ ಏನಾಗಲು ಬಯಸುವಿರಿ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್, ‘ನಾನು ಆರ್ಮಿಗೆ ಸೇರಲು ಹಾಗೂ ಯುವಕರಿಗೆ ಕೋಚ್ ಆಗಿ ಸೇವೆ ಸಲ್ಲಿಸಲು ಉತ್ಸುಕನಾಗಿರುವೆ’ ಎಂದು ಉತ್ತರಿಸಿದ್ದಾರೆ.

ಭಾರತೀಯ ಯುವಕರಿಗೆ ನಿಮ್ಮ ಸಂದೇಶವೇನು ಎಂದು ಗೋವಿಂದ್ ಎಂಬವರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಕ್ಷಯ್ ಕುಮಾರ್, ‘ನಾಳೆಯ ಉತ್ತಮ ದಿನ ಯುವಕರಿಂದಲೇ ಆರಂಭವಾಗುತ್ತದೆ. ಅವರೇ ದೇಶದ ಭವಿಷ್ಯ ಹಾಗೂ ಅವರಿಂದ ಉತ್ತಮ ಕೆಲಸಗಳಾಗಲಿ’ ಎಂದು ಹಾರೈಸಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಅಕ್ಷಯ್ ಕುಮಾರ್ ಬಿಡುವು ಮಾಡಿಕೊಂಡು ಅಭಿಮಾನಿಗೊಂದಿಗೆ ಟ್ವಿಟ್ಟರ್‍ನಲ್ಲಿ ಚಾಟಿಂಗ್‍ನಲ್ಲಿ ನಿರತರಾಗಿದ್ದರು. ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ತೊರುವಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *