BollywoodCinemaLatestMain Post

ಕೊನೆಗೂ ರಾಜಕೀಯ ಬರುವ ಕುರಿತು ಮೌನ ಮುರಿದ ಅಕ್ಷಯ್ ಕುಮಾರ್

Advertisements

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಟೌನ್ ಖಿಲಾಡಿ ಸಿನಿಮಾರಂಗಕ್ಕೆ ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಸುದ್ದಿಗೂ ನಟ ಅಕ್ಷಯ್ ಸ್ಪಷ್ಟನೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಟ, ನಿರ್ಮಾಪಕನಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ `ಸಾಮ್ರಾಟ್ ಪೃಥ್ವಿರಾಜ್’ ಮೂಲಕ ಸದ್ದು ಮಾಡಿದ್ದರು. ಈ ಬೆನ್ನಲ್ಲೇ ಅಕ್ಷಯ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗೆ ಕೊನೆಗೂ ನಟ ಮೌನ ಮುರಿದಿದ್ದಾರೆ.ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

ಇತ್ತೀಚೆಗಷ್ಟೇ ಅಕ್ಷಯ್ ನಟನೆಯ ಮುಂದಿನ ಚಿತ್ರ `ರಕ್ಷಾ ಬಂಧನ’ ಪ್ರಚಾರದ ವೇಳೆ ವರದಿಗಾರನೊಬ್ಬ ರಾಜಕೀಯ ಎಂಟ್ರಿಯ ಕುರಿತು ಪ್ರಶ್ನೇ ಕೇಳಿದ್ದಾರೆ. ಆಗ ನಿರ್ಮಾಪಕರಾಗಿ ವರ್ಷಕ್ಕೆ ಮೂರು ಸಿನಿಮಾ ಮಾಡ್ತೀನಿ, ನನ್ನ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಸಮಾಜಿಕವಾಗಿಯೂ ಮೆಸೇಜ್ ಕೊಡ್ತೀನಿ. ನನ್ನ ಸಿನಿಮಾಗಳ ಮೂಲಕ ನಾನು ಖುಷಿಯಾಗಿದ್ದೇನೆ. ಆದರೆ ರಾಜಕೀಯಕ್ಕೆ ಮಾತ್ರ ಬರೋದಿಲ್ಲ ಅಂತಾ ಅಕ್ಷಯ್ ಉತ್ತರಿಸಿದ್ದಾರೆ. ಅಕ್ಷಯ್ ನಿಲುವಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

Live Tv

Leave a Reply

Your email address will not be published.

Back to top button