ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ (Tree) ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ ಸಾವನ್ನಪ್ಪಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದು, ಅಕ್ಷಯ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!
ಇದೇ ಜೂನ್ 15ರಂದು ಬಸವನಗುಡಿಯ (Basavanagudi) ಬ್ರಹ್ಮ ಚೈತನ್ಯ ಮಂದಿರದ ಬಳಿ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ (29)ಗೆ ವೈದ್ಯರು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದರು. ಆದ್ರೆ ಶಸ್ತ್ರಚಿಕಿತ್ಸೆ ನಡೆದು 60 ತಾಸು ಕಳೆದ ಬಳಿಕವೂ ಮೆದುಳು ಸ್ಪಂದಿಸದೇ ಇದ್ದಿದ್ದರಿಂದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ (Brain Dead) ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಅಕ್ಷಯ್ ಬದುಕುಳಿಯುವ ಸಾಧ್ಯತೆ ತೀರ ಕಡಿಮೆಯಿತ್ತು. ಮೊಮ್ಮಗನ ಜೀವ ಉಳಿಯಲೆಂದು ಮೃತುಂಜಯ ಹೋಮ ನೆರವೇರಿಸಿದ್ದರು. ಆದ್ರೆ ವಿಧಿಯ ಆಟವೇ ಬೇರೆಯಿತ್ತು. ಕಾರ್ಡಿಯಾಕ್ ಅರೆಸ್ಟ್ (ಹೃದಯ ಸ್ತಂಭನ) ಆಗಿ ಇಂದು ಮಧ್ಯಾಹ್ನ 1 ಗಂಟೆಗೆ ಅಕ್ಷಯ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್
ಮಗನನ್ನ ನೋಡಲು ಒಂದೇ ಹಠ
ಇನ್ನೂ ನಿನ್ನೆಯಷ್ಟೇ ಡಯಾಲೀಸಿಸ್‌ಗೆ ಒಳಗಾಗಿದ್ದ ಅಕ್ಷಯ್ ತಂದೆ ಮಗನನ್ನ ನೋಡಲೇಬೇಕೆಂದು ಹಠ ಹಿಡಿದಿದ್ದರು. ಇಂದು ಅಪೋಲೋ ಆಸ್ಪತ್ರೆಗೆ ವ್ಹೀಲ್ ಚೇರ್‌ನಲ್ಲೇ ಬಂದು ಮಗನನ್ನ ನೋಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಗನ ಪ್ರಾಣಪಕ್ಷಿ ಹಾರಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅಕ್ಷಯ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಆಸ್ಪತ್ರೆ ಮುಂದೆ ಪೊಲೀಸ್ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್
ಏನಾಗಿತ್ತು?
ಇದೇ ಜೂ.15ರಂದು ಯುವಕ ಅಕ್ಷಯ್ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ ಕೊಂಬೆ ಬಿದ್ದು ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಕೊಂಬೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರುಗಡೆ ನಿಲ್ಲಿಸಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ಇದನ್ನೂ ಓದಿ: ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್
ಶ್ರೀನಿವಾಸನಗರದ ನಿವಾಸಿಯಾಗಿರುವ ಅಕ್ಷಯ್ ರಾಜಾಜಿನಗರದರುವ ಖಾಸಗಿ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಮರದ ಕೊಂಬೆ ಬಿದ್ದು ತಲೆಯ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿತ್ತು. ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ಅಕ್ಷಯ್ ತಂದೆಗೆ ಡಯಾಲಿಸಿಸ್ ನಡೆಯುತ್ತಿದ್ದು, ಕುಟುಂಬಕ್ಕೆ ಅಕ್ಷಯ್ ಆಧಾರವಾಗಿದ್ದರು. ಒಂದು ದಿನದ ಹಿಂದೆಯಷ್ಟೇ ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎಂದು ಪ್ರಕಟಿಸಿದ್ದರು.