ಚಿಕ್ಕೋಡಿ: ಸರ್ಕಾರದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಗೆ ತುಮಕೂರ ಸಿದ್ದಗಂಗಾ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ನಾಮಕರಣ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.
ನಡೆದಾಡುವ ದೇವರು, ತ್ರೀವಿಧ ದಾಸೋಹಿ ಅವರ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಗೆ ಶಿವುಕುಮಾರೇಶ್ವರ ನಾಮಕರಣ ಮಾಡಿರುವದು ಅಭಿನಂದನಾರ್ಹ. ಇದನ್ನೂ ಓದಿ: 2 ವರ್ಷದಿಂದ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನ ತೆಗೆದು ಹಾಕಿದ ತೆಲಂಗಾಣ ಸರ್ಕಾರ
ಅಕ್ಷರ ದಾಸೋಹ ನೀಡುವದರ ಮೂಲಕ ಶಿವಕುಮಾರ ಸ್ವಾಮೀಜಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಜಾತ್ಯಾತೀತವಾಗಿ ಅಕ್ಷರ ದಾಸೋಹ ಆರಂಭಿಸಿದವರು ಶಿವುಮಾರ ಸ್ವಾಮೀಜಿ.ಡಾ.ಶಿವುಕುಮಾರ ಸ್ವಾಮೀಜಿಗಳ ಹೆಸರಿನಿಂದ ರಾಜ್ಯದ ಮಕ್ಕಳು ಪ್ರಸಾದ ಸ್ವೀಕರಿಸುವಂತಾಗಲಿ. ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ
ಸರ್ಕಾರದ ಬಿಸಿಯೂಟ ಯೋಜನೆಗೆ ಶ್ರೀಗಳ ಹೆಸರು ಇಟ್ಟಿರುವುದು ಸ್ವಾಗತಾರ್ಹ ಎಂದು ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹುಕ್ಕೇರಿಯಲ್ಲಿ ಮಾಧ್ಯಮಗಳ ಮೂಲಕ ಸಿಎಂ ಅವರ ಘೋಷಣೆಯನ್ನ ಸ್ವಾಗತಿಸಿದ್ದಾರೆ.