– ಕತ್ತು ಕುಯ್ದುಕೊಂಡ ತಬ್ಲಿಘಿ
ಮುಂಬೈ: ಕೊರೊನಾ ಸೋಂಕಿತ ತಬ್ಲಿಘಿಯೋರ್ವ ಐಸೋಲೇಷನ್ ವಾರ್ಡ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಕೋಲಾದಲ್ಲಿ ನಡೆದಿದೆ.
30 ವರ್ಷದ ಸೋಂಕಿತ ಅಸ್ಸಾಂ ರಾಜ್ಯದ ನಾಗಾಂವ್ ಗ್ರಾಮದ ನಿವಾಸಿ. ಮೃತ ಸೋಂಕಿತ ಮಾರ್ಚ್ 6ರಿಂದ 8ರವರೆಗೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಜಮಾತ್ ನಲ್ಲಿ ಭಾಗಿಯಾಗಿದ್ದರು. ತದನಂತರ ಕೆಲ ಸದಸ್ಯರ ಜೊತೆ ಮಹಾರಾಷ್ಟ್ರದ ಅಕೋಲಾಗೆ ಬಂದಿದ್ದನು. ಅಕೋಲಾಗೂ ಮೊದಲು ಈ ತಂಡ ಬಲರಾಂಪುದಲ್ಲಿ ವಾಸ್ತವ್ಯ ಮಾಡಿತ್ತು.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿತೇಂದ್ರ ಪಾಪಲಕರ್, ಏಪ್ರಿಲ್ 7ರಂದು ಈ ಜಮಾತ್ ಸದಸ್ಯರು ತಾವೇ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲರ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದಿದ್ದರಿಂದ ಸದಸ್ಯರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 10ರಂದು ಬಂದ ವರದಿಯಲ್ಲಿ ಓರ್ವ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.
Advertisement
Advertisement
ಮರುದಿನ ಅಂದ್ರೆ ಶನಿವಾರ (ಏಪ್ರಿಲ್ 11) ಓರ್ವನ ಶವ ವಾರ್ಡ್ ನಲ್ಲಿಯ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಸ್ಪತ್ರೆಯಲ್ಲಿ ಹರಿತವಾದ ವಸ್ತುವಿನಿಂದ ಆತ ಕತ್ತು ಕುಯ್ದುಕೊಂಡಿದ್ದಾನೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದೇ ಐಸೋಲೇಷನ್ ವಾರ್ಡ್ ನಲ್ಲಿ 12 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು 12 ಜನರಿಂದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಪ್ರಕಾರ, ಸಾವನ್ನಪ್ಪಿದ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಈತ ಕಳೆದ 10 ತಿಂಗಳಿನಿಂದ ಕುಟುಂಬಸ್ಥರಿಂದ ದೂರವಿದ್ದ ಕಾರಣ ನೊಂದಿದ್ದನು ಎಂದು ಹೇಳುತ್ತಾರೆ.