ತೆಲುಗಿನ ಜನಪ್ರಿಯ ಯೂಟ್ಯೂಬರ್, ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ ಗಂಗವ್ವ (Gangavva) ಅವರ ಸಂಕಷ್ಟಕ್ಕೆ ಟಾಲಿವುಡ್ (Tollywood) ನಟ ನಾಗಾರ್ಜುನ (Nagarjuna) ಸಾಥ್ ನೀಡಿದ್ದಾರೆ. ಮನೆ ಕಟ್ಟಲು ಗಂಗವ್ವ ಅವರಿಗೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ: ರೆಡ್ ಲೆಹೆಂಗಾ ಧರಿಸಿ ನಟಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಟ್ರೋಲ್
View this post on Instagram
ಕಿರುತೆರೆ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಗಂಗವ್ವ ಗಮನ ಸೆಳೆದಿದ್ದರು. ಪ್ರೇಕ್ಷಕರ ಪ್ರೀತಿಯಷ್ಟೇ ಪಡೆದಿರೋದು ಮಾತ್ರವಲ್ಲ ನಾಗಾರ್ಜುನ ಅವರ ಸ್ನೇಹವನ್ನ ಕೂಡ ಸಂಪಾದಿಸಿದ್ದರು. ದೊಡ್ಮನೆ ವೇದಿಕೆಯಲ್ಲಿ ತಮಗೆ ಮನೆ ಕಟ್ಟುವ ಆಸೆಯಿದೆ ಎಂದು ಅವರು ತಿಳಿಸಿದ್ದರು. ಅದರಂತೆಯೇ ಗಂಗವ್ವ ಅವರ ಕನಸಿಗೆ ನಟ ಸಹಾಯ ಮಾಡಿದ್ದಾರೆ.
View this post on Instagram
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮನೆ (House) ಕಟ್ಟಲು ಎಷ್ಟು ಖರ್ಚಾಯಿತು, ಹಣ ಹೊಂದಿಸಿದ್ದು ಹೇಗೆ? ನಟ ನಾಗಾರ್ಜುನ ಎಷ್ಟು ಹಣ ಕೊಟ್ಟರು ಇತ್ಯಾದಿ ವಿಷಯಗಳ ಬಗ್ಗೆ ಗಂಗವ್ವ ಮಾತನಾಡಿದ್ದಾರೆ.
View this post on Instagram
ಮನೆ ಕಟ್ಟಲು 20 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿರುವ ಗಂಗವ್ವ, ನಟ ನಾಗಾರ್ಜುನ ಏಳು ಲಕ್ಷ ರೂಪಾಯಿ ಹಣವನ್ನು ಮನೆ ಕಟ್ಟಲೆಂದು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಾನು ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಐದು ವಾರ ಇದ್ದಿದ್ದಕ್ಕೆ ಸಂಭಾವನೆಯಾಗಿ ಹತ್ತು ಲಕ್ಷ ಹಣ ಕೊಟ್ಟಿದ್ದರು. ಎಲ್ಲವನ್ನೂ ಸೇರಿಸಿ ಮನೆ ಕಟ್ಟಿಸಿದ್ದಾಗಿ ಗಂಗವ್ವ ಹೇಳಿದ್ದಾರೆ. ಇದೀಗ ನಾಗಾರ್ಜುನ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೂ ಬಿಗ್ ಬಾಸ್ ಶೋ ಬಳಿಕ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಗಂಗವ್ವ ನಟಿಸಿದ್ದಾರೆ. ಚಿತ್ರರಂಗದಲ್ಲಿ ಗಂಗವ್ವ ಆಕ್ಟೀವ್ ಆಗಿದ್ದಾರೆ.