ಲಕ್ನೋ: ಬಿಜೆಪಿ ಆಡಳಿತದಲ್ಲಿ ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಬುಲ್ಡೋಜರ್‍ಗಳು ಜನರನ್ನು ತುಳಿಯಲು ಪ್ರಾರಂಭಿಸಿವೆ. ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
Advertisement
Advertisement
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವು ಜನರೊಂದಿಗೆ ಇಂತಹ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ. ಇದು ಅಮಾನವೀಯ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ಅಚ್ಛೆ ದಿನಗಳನ್ನು ಜನರು ಅನುಭವಿಸಿದ ನಂತರ ಜನರು ಹಳೆಯ ದಿನಗಳನ್ನು ಹಂಬಲಿಸಲು ಪ್ರಾರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ
Advertisement
Advertisement
ಟೋಲ್ ತೆರಿಗೆ ಕೂಡ ದುಬಾರಿಯಾಗಿದ್ದು, ಹೆದ್ದಾರಿಗಳಲ್ಲಿ ಪ್ರಯಾಣ ದುಬಾರಿಯಾಗಿದೆ ಎಂದ ಅವರು, ಬಿಜೆಪಿಯ ನೀತಿ ಹಾಗೂ ಉದ್ದೇಶದಲ್ಲಿ ಸಾರ್ವಜನಿಕ ಕಾಳಜಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅದು ತನ್ನ ಬೊಕ್ಕಸವನ್ನು ತುಂಬಲು ಮಾತ್ರ ಆಸಕ್ತಿ ಹೊಂದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ