ಲಕ್ನೋ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸೋಲುವ ಭೀತಿಯಿಂದಾಗಿ ಸಮಾಜವಾದಿ ಪಕ್ಷದ (ಎಸ್‍ಪಿ) ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಸುತ್ತಿದೆ. ಬಿಜೆಪಿಗೆ ಚುನಾವಣೆ ಸೋಲಿನ ಭಯ ಎದುರಾಗಿದೆ. ಇದಕ್ಕೂ ಮುನ್ನ ಯಾಕೆ ಈ ದಾಳಿಗಳು ನಡೆದಿಲ್ಲ? ಎಂದು ಆಡಳಿತ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಕಂಪನಿ ಸೇರಿದಂತೆ 7 ಕಂಪನಿಗಳು ಫೇಸ್‌ಬುಕ್‌ನಿಂದ ಬ್ಯಾನ್
Advertisement
Mau: An Income Tax raid is underway at the residence of national secretary of Samajwadi Party (SP), Rajeev Rai.
Raids are underway at a few more locations at the premises of people of SP chief Akhilesh Yadav. More details are awaited. pic.twitter.com/yJIDwC75qF
— ANI UP (@ANINewsUP) December 18, 2021
Advertisement
ಚುನಾವಣೆ ಸಮೀಪಿಸಿದಾಗಲೇ ಯಾಕೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೆಣಸಲು ಐಟಿ ಇಲಾಖೆಯೂ ಮುಂದಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಕ್ಸಸ್
Advertisement
Advertisement
ಉತ್ತರ ಪ್ರದೇಶದ ಹಲವೆಡೆ ಅಖಿಲೇಶ್ ಅವರ ಕೆಲವು ಆಪ್ತ ನಾಯಕರ ಮನೆಗಳ ಮೇಲೆ ಶನಿವಾರ ಐಟಿ ದಾಳಿ ನಡೆದಿದೆ. ಸಮಾಜವಾದಿ ಪಕ್ಷದ ವಕ್ತಾರ ರಾಜೀವ್ ರೈ, ಅಖಿಲೇಶ್ ಅವರ ವೈಯಕ್ತಿಕ ಕಾರ್ಯದರ್ಶಿ ಜೈನೇಂದ್ರ ಯಾದವ್ ಹಾಗೂ ಮತ್ತೊಬ್ಬ ನಾಯಕ ಮನೋಜ್ ಯಾದವ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್