ತೆಲುಗಿನ ನಟಿ ಪ್ರಗ್ಯಾ ಜೈಸ್ವಾಲ್ (Pragya Jaiswal) ಒಳಉಡುಪು ಧರಿಸದೆ ಬ್ಲೇಜರ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಹೊಸ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಸದಾ ಹೊಸ ಬಗೆಯ ಫೋಟೋಶೂಟ್‌ನಿಂದ ಗಮನ ಸೆಳೆಯುವ ಪ್ರಗ್ಯಾ ಇದೀಗ ಸಖತ್ ಹಾಟ್ ಅವತಾರ ತಾಳಿದ್ದಾರೆ. ಒಳಉಡುಪು ಧರಿಸದೆ ಬೆನ್ನು ತೋರಿಸುತ್ತಾ ಬ್ಲೇಜರ್‌ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ.
ತಮಿಳಿನ ‘ವೀರಟ್ಟು’ ಸಿನಿಮಾ ಮೂಲಕ ಪ್ರಗ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
2021ರಲ್ಲಿ ಬಾಲಯ್ಯ(Balayya) ಜೊತೆ ನಟಿಸಿದ ‘ಅಖಂಡ’ (Akhanda Film) ಚಿತ್ರದ ಸಕ್ಸಸ್‌ನಿಂದ ಪ್ರಗ್ಯಾಗೆ ಬೇಡಿಕೆ ಹೆಚ್ಚಾಯ್ತು. ಈ ಸಿನಿಮಾದಿಂದ ಅವರ ಕೆರಿಯರ್‌ಗೆ ಬ್ರೇಕ್ ಸಿಕ್ಕಿದೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ
ಬಳಿಕ ಈ ವರ್ಷ ತೆರೆಕಂಡ ‘ಡಾಕು ಮಹರಾಜ್’ (Daaku Maharaj) ಸಿನಿಮಾದಲ್ಲಿಯೂ ಅವರು ನಟಿಸಿದರು. ಬಾಲಯ್ಯ ಜೊತೆ ಮತ್ತೆ ತೆರೆಹಂಚಿಕೊಂಡರು. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ’ಬಿಗ್ ಬಾಸ್’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್
ಇದೀಗ ‘ಅಖಂಡ 2’ (Akhanda Film) ಸಿನಿಮಾದಲ್ಲಿಯೂ ಪ್ರಗ್ಯಾ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಜೊತೆಗೆ ಹಿಂದಿ ಮತ್ತು ತಮಿಳಿನಿಂದಲೂ ಅವರಿಗೆ ಉತ್ತಮ ಅವಕಾಶ ಅರಸಿ ಬರುತ್ತಿವೆ.